ವಾಷಿಂಗ್ಟನ್ (ಅಮೆರಿಕ): ಇಂಡೋ ಅಮೆರಿಕನ್ ಕಾನೂನು ತಜ್ಞ ನಿತಿನ್ ಶಾ ಅವರನ್ನ ಅಮೆರಿಕದ ಅಡ್ಮಿನಿಸ್ಟ್ರೇಟಿವ್ ಕಾನ್ಫರೆನ್ಸ್ನ ಕೌನ್ಸಿಲ್ ಆಗಿ ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದಾರೆ. ಪ್ರಸ್ತುತ ಅವರು ಅಮೆರಿಕದ ಸಾಮಾನ್ಯ ಆಡಳಿತ ಸೇವೆಗಳ ಜನರಲ್ ಕೌನ್ಸಿಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಯುಎಸ್ಎನ ಪ್ರಮುಖ ಸ್ವತಂತ್ರ್ಯ ಸಂಸ್ಥೆಗೆ ನೇಮಕವಾಗಿದ್ದಾರೆ.
ಇವರು ಈ ಸಂಸ್ಥೆಯ ಮುಂದೆ ಬರುವ ಆಡಳಿತ ಸಮಸ್ಯೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಜೊತೆಗೆ ಸಾಮಾನ್ಯ ಆಡಳಿತ ಸೇವೆ ನಿಯೋಜಿತ ಅಧಿಕಾರಿ ಮತ್ತು ಮಾಹಿತಿ ಕಾಯ್ದೆಯ ಅಧಿಕಾರಿಯಾಗಿರಲಿದ್ದಾರೆ. ಇವರಿಗೆ ದೇಶಾದ್ಯಂತ ಸುಮಾರು 170 ವಕೀಲರ ಮತ್ತು ಸಿಬ್ಬಂದಿ ಇರುವ ಕಚೇರಿಯನ್ನ ನಿರ್ವಹಿಸಬೇಕಾಗುತ್ತದೆ ಎಂದು ಶ್ವೇತಭವನ ತಿಳಿಸಿದೆ.
ಇದಕ್ಕೂ ಮೊದಲು ಅವರು ನ್ಯಾಯಾಂಗ ಇಲಾಖೆಯಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥರಾಗಿ ಮತ್ತು ಕಾನೂನು ಸಲಹೆಗಾರರ ಕಚೇರಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ಆಡಳಿತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ ಲಾಭೋದ್ದೇಶವಿಲ್ಲದ ಸಂಸ್ಥೆಯಲ್ಲಿ ಹಿರಿಯ ಸಲಹೆಗಾರಾಗಿಯೂ ದುಡಿದಿದ್ದಾರೆ. ಬೈಡನ್ ಹಾಗೂ ಕಮಲಾ ಹ್ಯಾರಿಸ್ ತಂಡದಲ್ಲಿ ಕಾನೂನು ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ನಿತಿನ್ ಶಾ ಇಲ್ಲಿನ ಸ್ಯಾನ್ ಡಿಯಾಗೊದಲ್ಲಿ ಹುಟ್ಟಿ ಬೆಳೆದಿದ್ದಾರೆ. ಆದರೆ ಅವರ ತಂದೆ - ತಾಯಿ ಭಾರತೀಯ ಮೂಲದವರಾಗಿದ್ದಾರೆ.
ಇದನ್ನೂ ಓದಿ: ಕ್ಯಾಪಿಟಲ್ ಮೇಲೆ ದಾಳಿ ಪ್ರಕರಣ: 11 ಮಂದಿ ಸಮನ್ಸ್ ನೀಡಿದ ತನಿಖಾ ಸಮಿತಿ