ETV Bharat / international

ಜಿ-7 ನಲ್ಲಿ ಭಾರತದ ಉಪಸ್ಥಿತಿ ಅತ್ಯಂತ ಮಹತ್ವದ್ದಾಗಿದೆ: ತಾರಂಜಿತ್ ಸಿಂಗ್ ಸಂಧು - ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅತ್ಯಂತ ಶಕ್ತಿಶಾಲಿ ಜಿ -7 ರಾಷ್ಟ್ರಗಳ ಭಾಗವಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮ್ಮತಿಸಿದ್ದು, ಇದು ವಿಶ್ವದಲ್ಲಿ ಭಾರತದ ಉನ್ನತ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.

Taranjit Singh Sandhu
ತಾರಂಜಿತ್ ಸಿಂಗ್ ಸಂಧು
author img

By

Published : Jun 9, 2020, 3:42 PM IST

ವಾಷಿಂಗ್ಟನ್: 'ವಿಸ್ತೃತ' ಜಿ- 7 ಶೃಂಗಸಭೆಯಲ್ಲಿ ಭಾರತದ ಉಪಸ್ಥಿತಿ ಅತ್ಯಂತ ಮಹತ್ವದ್ದಾಗಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.

ಜೂನ್​ 2 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ದೂರವಾಣಿ ಸಂಭಾಷಣೆ ಕುರಿತು ಮಾತನಾಡಿದ ತಾರಂಜಿತ್ ಸಿಂಗ್, ಅಮೆರಿಕದಲ್ಲಿ ನಡೆಯಲಿರುವ ಜಿ -7 ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪಿಎಂ ಮೋದಿಗೆ ಟ್ರಂಪ್‌ ಆಹ್ವಾನ ನೀಡಿದ್ದಾರೆ. ಇದಕ್ಕೆ ಮೋದಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಭಯ ನಾಯಕರು ಹಾಗೂ ಎರಡು ದೇಶಗಳ ಹಿರಿಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಜಿ -7 ಸಭೆ ವಿಸ್ತರಿಸುವ ಟ್ರಂಪ್​ರ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಕೆಲಸ ಮಾಡಲು ಸಂತೋಷವೆನಿಸುತ್ತದೆ ಎಂದರು.

ಅಲ್ಲದೇ ಜಿ- 7ಗೆ ಭಾರತವನ್ನು ಆಹ್ವಾನಿಸುತ್ತಿರುವುದು ಇದೇ ಮೊದಲಲ್ಲ. ಕೋವಿಡ್​​ ಬಿಕ್ಕಟ್ಟಿನ ಸಂದರ್ಭದಲ್ಲಿ 1.3 ಬಿಲಿಯನ್​ ಜನರ ಎದುರು ಭಾರತದ ಉಪಸ್ಥಿತಿ ಅತ್ಯಂತ ಮಹತ್ವದ್ದಾಗಿದೆ. ಇದು ವಿಶ್ವದಲ್ಲಿ ಭಾರತದ ಉನ್ನತ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತದೆ ಎಂದು ಸಿಂಗ್​ ಹೇಳಿದರು.

ಚೀನಾ ವಿಚಾರವಾಗಿ ಒಂದು ನಿರ್ಧಾರಕ್ಕೆ ಬರುವ ಕುರಿತು ಚರ್ಚಿಸಲು ಅತ್ಯಂತ ಶಕ್ತಿಶಾಲಿ ಜಿ -7 ರಾಷ್ಟ್ರಗಳ ಭಾಗವಾಗಲು ಟ್ರಂಪ್​ ಪ್ರಸ್ತಾಪಕ್ಕೆ ಮೋದಿ ಸಮ್ಮತಿ ನೀಡಿದ್ದಾರೆ. ಜಿ -7 ಶೃಂಗಸಭೆಯನ್ನು ಸೆಪ್ಟೆಂಬರ್​ವರೆಗೆ ಮುಂದೂಡಿರುವ ಟ್ರಂಪ್​, ಭಾರತ, ರಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾವನ್ನು ಈ ಸಭೆಗೆ ಆಹ್ವಾನಿಸಿ ಚೀನಾದೊಂದಿಗೆ ಭವಿಷ್ಯದಲ್ಲಿ ನಡೆದುಕೊಳ್ಳಬೇಕಾದ ಬಗೆಯ ಬಗ್ಗೆ ಚರ್ಚಿಸಲು​ ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.