ETV Bharat / international

ಕ್ಯಾಪಿಟಲ್ ​​ಮೇಲೆ ದಾಳಿ ಪ್ರಕರಣ: 11 ಮಂದಿ ಸಮನ್ಸ್ ನೀಡಿದ ತನಿಖಾ ಸಮಿತಿ - 11 ಮಂದಿ ಸಮನ್ಸ್ ನೀಡಿದ ತನಿಖಾ ಸಮಿತಿ

ಹಿಂದಿನ ವಾರವಷ್ಟೇ ಶ್ವೇತಭವನದ ಮಾಜಿ ಅಧಿಕಾರಿಗೆ ಕ್ಯಾಪಿಟಲ್ ಮೇಲೆ ದಾಳಿ ನಡೆದ ವೇಳೆಯಲ್ಲಿ ಮತ್ತು ದಾಳಿಯ ನಂತರ ಡೊನಾಲ್ಡ್​ ಟ್ರಂಪ್ ಜೊತೆಗೆ ಸಂಪರ್ಕದಲ್ಲಿದ್ದ ಕಾರಣದಿಂದ ಸಮನ್ಸ್ ನೀಡಲಾಗಿತ್ತು.

House panel subpoenas organisers of Jan 6 Trump rally
ಕ್ಯಾಪಿಟಲ್ ಮೇಲೆ ದಾಳಿ ಪ್ರಕರಣ: 11 ಮಂದಿ ಸಮನ್ಸ್ ನೀಡಿದ ತನಿಖಾ ಸಮಿತಿ
author img

By

Published : Sep 30, 2021, 9:59 AM IST

ವಾಷಿಂಗ್ಟನ್(ಅಮೆರಿಕ): ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಕ್ಯಾಪಿಟಲ್​ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರಿಂದ ದಾಳಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಮೆರಿಕ ಸಂಸತ್​ನ ಸದನ ಸಮಿತಿಯೊಂದು 11 ಮಂದಿ ಅಧಿಕಾರಿಗಳಿಗೆ ಸಮನ್ಸ್ ನೀಡಿದೆ.

ಎಲ್ಲ 11 ಮಂದಿ ಅಧಿಕಾರಿಗಳು ಡೊನಾಲ್ಡ್ ಟ್ರಂಪ್ ಪರವಾಗಿ ನಡೆದ ಸಭೆ, ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಅವರಿಗೆ ಸಮನ್ಸ್ ನೀಡಿ, ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಹಿಂದಿನ ವಾರವಷ್ಟೇ ಶ್ವೇತಭವನದ ಮಾಜಿ ಅಧಿಕಾರಿಗೆ ಸಮನ್ಸ್ ನೀಡಲಾಗಿತ್ತು. ಕ್ಯಾಪಿಟಲ್ ಮೇಲೆ ದಾಳಿ ನಡೆದ ವೇಳೆಯಲ್ಲಿ ಮತ್ತು ದಾಳಿಯ ನಂತರ ಡೊನಾಲ್ಡ್​ ಟ್ರಂಪ್ ಜೊತೆಗೆ ಈ ಅಧಿಕಾರಿ ಸಂಪರ್ಕದಲ್ಲಿದ್ದ ಆರೋಪದಲ್ಲಿ ಸಮನ್ಸ್ ನೀಡಲಾಗಿದೆ.

ತನಿಖಾ ಸಮಿತಿಗೆ ಮಿಸ್ಸಿಸ್ಸಿಪ್ಪಿ ಪ್ರತಿನಿಧಿ ಬೆನ್ನೀ ಥಾಂಪ್ಸನ್ ಅಧ್ಯಕ್ಷರಾಗಿದ್ದು, ಕ್ಯಾಪಿಟಲ್​ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಮತ್ತು ಅದಕ್ಕೂ ಮೊದಲು ಯಾವ ಯಾವ ರೀತಿಯ ವಿದ್ಯಮಾನಗಳು ಜರುಗಿದ್ದವು ಎಂಬ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: ಪದ್ಮಾ ನದಿಯಲ್ಲಿ ದೋಣಿ ಮಗುಚಿ ನಾಲ್ವರು ಮೃತ..11 ಮಂದಿ ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.