ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಕಮಲಾ ಹ್ಯಾರಿಸ್ ಮತ್ತು ಜೋಬಿಡೆನ್ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ವಿಸ್ಕೋನ್ಸಿನ್ ಹಿಂಸಾಚಾರಕ್ಕೆ ಟ್ರಂಪ್ ಕಾರಣಕರ್ತರಾಗಿದ್ದಾರೆ. ಅಲ್ಲದೆ, ಕೊರೊನಾ ವೈರಸ್ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಟ್ರಂಪ್ ನಾಯಕತ್ವ ವಿಫಲವಾಗಿದೆ ಎಂದು ದೂರಿದ್ದಾರೆ.
ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದ ಸಮರೋಪದ ಸಮಾರಂಭವನ್ನು ಉದ್ದೇಶಿಸಿ ಟ್ರಂಪ್ ಮಾತನಾಡುವ ಗಂಟೆಗಳ ಮೊದಲು ಕಮಲಾ ಹ್ಯಾರಿಸ್ ಈ ರೀತಿ ಟೀಕೆಗಳನ್ನು ಮಾಡಿದ್ದಅರೆ.