ETV Bharat / international

Pegasus ಮೂಲಕ 1,400 WhatsApp​ ಬಳಕೆದಾರರ ಮಾಹಿತಿ ಸೋರಿಕೆಯಾಗಿತ್ತು: ಸಿಇಒ ವಿಲ್​​ ಕ್ಯಾಥ್​ಕಾರ್ಟ್ - ವಾಟ್ಸಾಪ್​

ದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ Pegasus​ ಬಗ್ಗೆ WhatsApp​ CEO ಪ್ರತಿಕ್ರಿಯಿಸಿದ್ದಾರೆ. ಪೆಗಾಸಸ್ ಮೂಲಕ 1,400 WhatsApp​ ಬಳಕೆದಾರರ ಮಾಹಿತಿ ಸೋರಿಕೆಯಾಗಿತ್ತು: ಸಿಇಒ ವಿಲ್​​ ಕ್ಯಾಥ್​ಕಾರ್ಟ್

ಸಿಇಒ ವಿಲ್​​ ಕ್ಯಾಥ್​ಕಾರ್ಟ್
ಸಿಇಒ ವಿಲ್​​ ಕ್ಯಾಥ್​ಕಾರ್ಟ್
author img

By

Published : Jul 25, 2021, 1:49 PM IST

ವಾಷಿಂಗ್ಟನ್: ಭಾರತದಲ್ಲಿ ಭಾರಿ ಸದ್ದು ಮಾಡುತ್ತಿರುವ ಪೆಗಾಸಸ್​ ಬಗ್ಗೆ WhatsApp​ CEO ವಿಲ್​ ಕ್ಯಾಥ್​ಕಾರ್ಟ್​​ ಪ್ರತಿಕ್ರಿಯೆ ನೀಡಿದ್ದಾರೆ. ಪೆಗಾಸಸ್​​ ದೇಶದ ಗಣ್ಯರು, ಸರ್ಕಾರಿ ಅಧಿಕಾರಿಗಳ ಮೊಬೈಲ್​​ನಲ್ಲಿರುವ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರಗಳಿಗೆ ಸಹಾಯ ಮಾಡುತ್ತದೆ. ಹಾಗಾಗಿ, ಬಹುತೇಕ ಸರ್ಕಾರಗಳು ಇಸ್ರೇಲ್​ನ ಎನ್​ಎಸ್​ಒ ಕಂಪನಿಯ ಪೆಗಾಸಸ್ ಬಳಸುತ್ತಿದ್ದಾರೆ ಎಂದರು.

2019 ರಲ್ಲಿ 1400 ಕ್ಕೂ ಹೆಚ್ಚು ವಾಟ್ಸಾಪ್ ಬಳಕೆದಾರರ ಮೇಲೆ ಪೆಗಾಸಸ್​​ ಕಣ್ಗಾವಲಿಟ್ಟಿದ್ದು, ಮಾಹಿತಿ ಸೋರಿಕೆಯಾಗಿತ್ತು. ಇವರಲ್ಲಿ ವಿಶ್ವದ ಗಣ್ಯರು, ರಾಜಕೀಯ ನಾಯಕರು ಹಾಗೂ ಪತ್ರಕರ್ತರು ಸೇರಿದ್ದರು ಎಂದು ಕ್ಯಾಥ್​ಕಾರ್ಟ್ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಎನ್​ಎಸ್​ಒ ಮಾಲ್ವೇರ್​ನಿಂದ ವಾಟ್ಸಾಪ್​ ಬಳಕೆದಾರರನ್ನು ಗುರಿಯಾಗಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಬಂದ ಕೂಡಲೇ ನಾವು ಎಚ್ಚೆತ್ತುಕೊಂಡು ಕ್ರಮ ಕೈಗೊಂಡೆವು. ಈ ಬಗ್ಗೆ ವಿಶ್ವದ ಎಲ್ಲಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೆವು ಎಂದಿದ್ದಾರೆ.

ಪೆಗಾಸಸ್​​, ಮಾನವ ಹಕ್ಕುಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯಾರೊಬ್ಬರ ಮೊಬೈಲ್ ಕೂಡ ಸುರಕ್ಷಿತವಾಗಿಲ್ಲ. ಸ್ಪೈ ವೇರ್​​ ಈ ಎಲ್ಲದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕ್ಯಾಥ್​ಕಾರ್ಟ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: "ಪೆಗಾಸಸ್​ನಂತಹ ತಂತ್ರಜ್ಞಾನಗಳಿಂದಾಗಿ ಲಕ್ಷಾಂತರ ಜನರು ರಾತ್ರಿಯಲ್ಲಿ ಚೆನ್ನಾಗಿ ನಿದ್ರಿಸುತ್ತಾರೆ": NSO ಸಮರ್ಥನೆ

ಅಲ್ಲದೆ, ಸರ್ಕಾರಗಳು ಇಂಥ ದುಷ್ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.