ವಾಷಿಂಗ್ಟನ್ : ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೈನಿಕರನ್ನು ಕೊಲ್ಲಲು ತಾಲಿಬಾನ್ ಉಗ್ರರಿಗೆ ರಷ್ಯಾ ಗುಪ್ತವಾಗಿ ಸಹಾಯ ಮಾಡಿದೆ ಎಂಬ ಆರೋಪದ ಬಗ್ಗೆ ಮಾಹಿತಿ ನೀಡಲು ಎಂಟು ಶಾಸಕರು ಶ್ವೇತ ಭವನದ ಬ್ರೀಫಿಂಗ್ಗೆ ಹಾಜರಾಗಿದ್ದರು.
ಈ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೆಚ್ಚಿನ ಮಾಹಿತಿ ನೀಡಬೇಕೆಂದು ಶಾಸಕರು ಈ ವೇಳೆ ಆಗ್ರಹಿಸಿದ್ದಾರೆ. ಇನ್ನು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಅವರು ಬ್ರೀಫಿಂಗ್ಗೆ ಹಾಜರಾಗಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೇಯ್ಲಿ ಮೆಕ್ ಎನಾನಿ ಹೇಳಿದ್ದಾರೆ.
ಈ ಬಗ್ಗೆ ಅಧ್ಯಕ್ಷ ಟ್ರಂಪ್ ಅವರಿಗೆ ಮಾಹಿತಿ ನೀಡಲು ಶ್ವೇತಭವನ ವರದಿ ಸಿದ್ಧಪಡಿಸುತ್ತಿದೆ. ಯಾಕೆಂದರೆ, ರಕ್ಷಣಾ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತದೆ. ಇನ್ನು ಅಧ್ಯಕ್ಷರಿಗೆ ಮಾಹಿತಿ ನೀಡುವ ಮೊದಲು ಶಾಸಕರಿಗೆ ಗುಪ್ತಚರ ಇಲಾಖೆ ಯಾಕೆ ಮಾಹಿತಿ ನೀಡುತ್ತದೆ ಎಂಬವುದರ ಬಗ್ಗೆ ಹೇಳಲು ಮೆಕ್ ಎನಾನಿ ನಿರಾಕರಿಸಿದ್ದಾರೆ.
ರಾಷ್ಟ್ರೀಯ ವಿದೇಶಾಂಗ ಗುಪ್ತಚರ ನಿರ್ದೇಶಕ ಜಾನ್ ರಾಟ್‌ಕ್ಲಿಫ್, ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯೆನ್ ನೇತೃತ್ವದಲ್ಲಿ ನಡೆದ ಬ್ರೀಫಿಂಗ್ನಲ್ಲಿ ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ರ್ಯಾಂಕಿಂಗ್ ಸದಸ್ಯ ರೆಪ್ ಮೈಕೆಲ್ ಮೆಕ್‌ಕಾಲ್ ಮತ್ತು ರೆಪ್ ಆಡಮ್ ಕಿನ್‌ಜಿಂಜರ್ ಇದ್ದರು. ಶಾಸಕರು ನೀಡಿದ ಮಾಹಿತಿಯ ನಿಖರತೆಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಮೆಕ್‌ಕಾಲ್ ಮತ್ತು ಕಿನ್‌ಜಿಂಜರ್ ತಿಳಿಸಿದ್ದಾರೆ. ಪರಿಶೀಲನೆ ವೇಳೆ ಪುಟಿನ್ ಆಡಳಿತದ ಪಾತ್ರ ಖಚಿತವಾದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಾವು ಆಡಳಿತವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.