ETV Bharat / international

ಗೂಗಲ್ ಪ್ಲೇ ಸ್ಟೋರ್‌ನಿಂದ ಟ್ರಂಪ್​ ಪ್ರಚಾರದ 'ಆ್ಯಪ್'​​ ಔಟ್​!

ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದ ಬಳಿಕ ಅವರನ್ನು ಬಂಧಿಸಿ ವಿಚಾರಣೆ ನಡೆಸುವುದು ಸೇರಿದಂತೆ ಅವರ ಸಾಮಾಜಿಕ ತಾಣಗಳ ಮಾಹಿತಿ ಕಲೆಹಾಕಲಾಗುತ್ತಿದೆ. ಇದೀಗ ಗೂಗಲ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರ 2020ರ ಚುನಾವಣೆ ಪ್ರಚಾರದ ಆ್ಯಪ್​ ಅನ್ನು ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

Google removes Trump's campaign app from Play Store
ಗೂಗಲ್ ಪ್ಲೇ ಸ್ಟೋರ್‌ನಿಂದ ಟ್ರಂಪ್​ ಪ್ರಚಾರದ 'ಆ್ಯಪ್'​​ ಔಟ್​!
author img

By

Published : Feb 18, 2021, 6:33 PM IST

ಸ್ಯಾನ್ ಫ್ರಾನ್ಸಿಸ್ಕೊ: ಈಗಾಗಲೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದುಪಡಿಸಲಾಗಿದ್ದರೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇದರ ಮುಂದುವರಿದ ಕ್ರಮವಾಗಿ ಗೂಗಲ್ ಇದೀಗ ತನ್ನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ 2020 ಚುನಾವಣೆಯ ಪ್ರಚಾರದ ಆ್ಯಪ್​ ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ಆ್ಯಪ್​ನಲ್ಲಿ ಯಾವುದೇ ವಿಷಯವನ್ನು ಅಪ್​ಲೋಡ್​ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅದನ್ನು ತೆಗೆದುಹಾಕಲಾಗಿದೆ ಎಂದು ಆಂಡ್ರಾಯ್ಡ್ ಪೊಲೀಸ್ ವೆಬ್​ಸೈಟ್ ಹೇಳಿದೆ.

ನವೆಂಬರ್ 2020 ರ ಚುನಾವಣೆಯ ನಂತರ ಆ್ಯಪ್​‌ ಅನ್ನು ಆಂಡ್ರಾಯ್ಡ್ ಆವೃತ್ತಿ ಮತ್ತು ಐಒಎಸ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಅಕ್ಟೋಬರ್ 30 ರಿಂದ ಪ್ಲೇ ಸ್ಟೋರ್ ಆವೃತ್ತಿಯನ್ನು ನವೀಕರಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ಟ್ರಂಪ್ ಅವರ ಪ್ರಚಾರದ ಆ್ಯಪ್​ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ನಾವು ಹಲವು ಬಾರಿ ಡೆವಲಪರ್‌ಗೆ ತಿಳಿಸಿದ್ದೇವೆ ಎಂದು ಗೂಗಲ್ ವಕ್ತಾರರು ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ಲಸಿಕೆ ವಿತರಣೆಯಲ್ಲಿನ ಅಸಮತೋಲನ ಸರಿದೂಗಿಸಲು ಸದೃಢ ದೇಶಗಳಿಗೆ ಕರೆ

ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್‌ಲೋಡ್ ಮಾಡಲಾದ ಆ್ಯಪ್​ಗಳು ಉತ್ತಮ ಗುಣಮಟ್ಟದ ಕಾರ್ಯವನ್ನು ಒದಗಿಸುತ್ತವೆ ಎಂದು ಜನರು ನಿರೀಕ್ಷಿಸುತ್ತಾರೆ. ಹೀಗಾಗಿ, ಆ್ಯಪ್​ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅವುಗಳನ್ನು ತೆಗೆದುಹಾಕುವುದು ನಮ್ಮ ನೀತಿಯಾಗಿದೆ ಎಂದು ವಕ್ತಾರರು ಟೆಕ್​​ ಕ್ರಂಚ್​ಗೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.