ಯುಎಸ್ (ಬರ್ಕ್ಲೆ) : ಅಮೆರಿಕದ ಬರ್ಕ್ಲೆಯಲ್ಲಿರುವ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪಿಹೆಚ್‌ಡಿ ವಿದ್ಯಾರ್ಥಿನಿಯ ಟ್ವೀಟನ್ನು ಗೂಗಲ್ ಸಿಇಒ ಸುಂದರ್ ಪಿಚೈ ಶೇರ್ ಮಾಡಿ ಗಮನ ಸೆಳೆದಿದ್ದಾರೆ.
4 ವರ್ಷಗಳ ಹಿಂದೆ ನಾನು ಕ್ವಾಂಟಮ್ ಭೌತಶಾಸ್ತ್ರ ಪರೀಕ್ಷೆಯಲ್ಲಿ ಸೊನ್ನೆ ಅಂಕ ಪಡೆದಿದ್ದೆ. ಇದೇ ಭಯದಲ್ಲಿ ನಾನು ಪ್ರಾಧ್ಯಾಪಕರನ್ನು ಭೇಟಿ ಮಾಡಿ, ಭೌತಶಾಸ್ತ್ರವನ್ನು ತ್ಯಜಿಸಬೇಕೆಂದು ಭಯದಿಂದ ಹೇಳಿದ್ದೆ. ಆದರೆ ಇಂದು ನಾನು ಉನ್ನತ ಶ್ರೇಣಿಯ ಖಗೋಳ ಭೌತಶಾಸ್ತ್ರ ಪಿಹೆಚ್‌ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಲ್ಲದೇ 2 ಪತ್ರಿಕೆಗಳನ್ನು ಸಹ ಪ್ರಕಟಿಸಿದ್ದೇನೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಎಲ್ಲರಿಗೂ ಕಷ್ಟದ ವಿಷಯಗಳೇ. ಆದರೆ ನೀವು ಪಡೆಯುವ ಶ್ರೇಣಿಯಿಂದ ನೀವು ಸಾಧಿಸಲು ಅಸಾಧ್ಯ ಎಂದು ಹೇಳಲು ಆಗಲ್ಲ ಎಂದು ಸರಫಿನಾ ನ್ಯಾನ್ಸ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಗಮನ ಸೆಳೆದಿದೆ.
-
Well said and so inspiring! https://t.co/qHBwdv3fmS
— Sundar Pichai (@sundarpichai) November 21, 2019 " class="align-text-top noRightClick twitterSection" data="
">Well said and so inspiring! https://t.co/qHBwdv3fmS
— Sundar Pichai (@sundarpichai) November 21, 2019Well said and so inspiring! https://t.co/qHBwdv3fmS
— Sundar Pichai (@sundarpichai) November 21, 2019
ಪಿಹೆಚ್‌ಡಿ ವಿದ್ಯಾರ್ಥಿನಿ ಸರಫಿನಾ ನ್ಯಾನ್ಸ್ ಟ್ವೀಟ್ ಅನ್ನು ಗೂಗಲ್ ಸಿಇಒ ಸುಂದರ್ ಪಿಚಾಯಿ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದು, ಪರೀಕ್ಷೆಯಲ್ಲಿ ಗಳಿಸುವ ಅಂಕ ಸಾಧನೆಗೆ ಕೈಗನ್ನಡಿಯಲ್ಲ. ಸಾಧಿಸಲು ಅಚಲ ಉತ್ಸಾಹ, ಬಿಡದ ಛಲ ಮುಖ್ಯ ಎಂಬುದನ್ನು ಎತ್ತಿಹಿಡಿದಿದ್ದಾರೆ.