ETV Bharat / international

ಅಲೆಕ್ಸಾ ಹಿಂದಿಕ್ಕಿದ ಗೂಗಲ್​ ಅಸಿಸ್ಟಂಟ್​: ಸ್ಮಾರ್ಟ್​ಫೋನ್​ ಲೋಕದಲ್ಲಿ ಮುಂದುವರಿದ ಸಿರಿ ಹವಾ​ - ಗೂಗಲ್ ಅಸಿಸ್ಟೆಂಟ್

ಡಿಜಿಟಲ್ ಅಸಿಸ್ಟೆಂಟ್‌ಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಗೂಗಲ್ ಅಸಿಸ್ಟೆಂಟ್, ಅಮೆಜಾನ್ ನ ಅಲೆಕ್ಸಾ ಎಕೋವನ್ನು ಮತ್ತೊಮ್ಮೆ ಹಿಂದಿಕ್ಕಿದೆ. ಆದರೆ, ಸ್ಮಾರ್ಟ್​ಫೋನ್​ ಐಕ್ಯೂ ಪರೀಕ್ಷೆಯಲ್ಲಿ ಸಿರಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ

ಎಲೆಕ್ಸಾವನ್ನು ಹಿಂದಿಕ್ಕಿದ ಗೂಗಲ್​ ಅಸಿಸ್ಟಂಟ್​: ಮತ್ತೆ ಮುಂಚೂಣಿ ಸಾಧಿಸಿದ ಆಪಲ್ ಸೀರಿಸ್​
author img

By

Published : Aug 19, 2019, 7:43 PM IST

ಸ್ಯಾನ್ ಫ್ರಾನ್ಸಿಸ್ಕೋ: ಡಿಜಿಟಲ್ ಅಸಿಸ್ಟೆಂಟ್‌ಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಗೂಗಲ್ ಅಸಿಸ್ಟೆಂಟ್, ಅಮೆಜಾನ್ ನ ಅಲೆಕ್ಸಾ ಎಕೋವನ್ನು ಮತ್ತೊಮ್ಮೆ ಹಿಂದಿಕ್ಕಿದೆ. ಆದರೆ, ಸ್ಮಾರ್ಟ್​ಫೋನ್​ ಐಕ್ಯೂ ಪರೀಕ್ಷೆಯಲ್ಲಿ ಸಿರಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ

ರಿಸರ್ಚ್-ಲಿಂಕ್ಡ್​ ವೆಂಚರ್ ಕ್ಯಾಪಿಟಲ್ ಸಂಸ್ಥೆ ಲೂಪ್ ವೆಂಚರ್‌ನ ವಾರ್ಷಿಕ ಪ್ರಯೋಗದಲ್ಲಿ ಲಭಿಸಿರುವ ಮಾಹಿತಿಯ ಪ್ರಕಾರ, ಸಂಶೋಧನಾ ತಂಡವು ಪ್ರಮುಖ ಡಿಜಿಟಲ್​ ಅಸಿಸ್ಟಂಟ್​ಗಳಾದ- ಗೂಗಲ್​ ಅಸಿಸ್ಟಂಟ್, ಅಲೆಕ್ಸಾ, ಸಿರಿಗೆ ತಲಾ 800 ಪ್ರಶ್ನೆಗಳನ್ನು ಕೇಳಿತ್ತು. ಅದರಲ್ಲಿ ಗೂಗಲ್​ ಅಸಿಸ್ಟಂಟ್​ ಪ್ರತಿಯೊಂದು ಪ್ರಶ್ನೆಯನ್ನು ಅರ್ಥೈಸಿಕೊಳ್ಳುವಲ್ಲಿ ಗೆದ್ದಿದ್ದು, ಶೇ. 92.3ರಷ್ಟು ಸರಿಯಾದ ಉತ್ತರ ನೀಡಿದೆ. ಸಿರಿ ಎರಡು ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ, ಅಲೆಕ್ಸಾ ಕೇವಲ ಒಂದು ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ.

ಉತ್ಪನ್ನ ವಿಭಾಗದಲ್ಲಿ ಗೂಗಲ್​ ಅಸಿಸ್ಟೆಂಟ್ ಹಾಗೂ ಅಲೆಕ್ಸಾ ನಡುವೆ ಸ್ಪರ್ಧೆ ಇದ್ದರೆ ಇತ್ತ ಸಿರಿ ಮೊಬೈಲ್​, ಟ್ಯಾಬ್ಲೆಟ್​ ಆ್ಯಪ್​ಗಳಲ್ಲಿ ಬೆಸ್ಟ್​ ಎನ್ನುವ ಕೀರ್ತಿಗೆ ಪಾತ್ರವಾಗಿದೆ.

2018ರಲ್ಲಿ ಕೇಳಿದ್ದ ಒಟ್ಟು ಪ್ರಶ್ನೆಗಳಿಗೆ ಗೂಗಲ್​ ಅಸಿಸ್ಟಂಟ್​ ಶೇ. 86 ರಷ್ಟು, ಸಿರಿ ಶೇ.79 ಮತ್ತು ಅಲೆಕ್ಸಾ ಶೇ. 61 ರಷ್ಟು ನಿಖರವಾಗಿ ಉತ್ತರಿಸಿದ್ದವು. ಇನ್ನೂ ಈ ಬಾರಿ ಗೂಗಲ್​ ಅಸಿಸ್ಟಂಟ್​ ಶೇ. 93 ರಷ್ಟು ಸರಿ ಉತ್ತರ ನೀಡಿದರೆ, ಸಿರಿ ಶೇ.83 ಮತ್ತು ಎಲೆಕ್ಸಾ ಶೇ. 80ರಷ್ಟು ನಿಖರವಾಗಿ ಉತ್ತರಿಸಿವೆ.

ಇನ್ನೂ, ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್ ಸ್ಪೀಕರ್​ ಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದ್ದು, ಎರಡರ ತಂತ್ರಜ್ಞಾನವು ಒಂದೇ ಆಗಿದ್ದರೂ, ಎರಡನ್ನೂ ವಿಭಿನ್ನವಾಗಿ ಬಳಸಲಾಗುತ್ತದೆ ಎಂದು ವರದಿ ತಿಳಿಸಿದೆ.

ಏನೀ ಉತ್ಪನ್ನಗಳು?: ಗೂಗಲ್​ ಅಸಿಸ್ಟೆಂಟ್​ ಹಾಗೂ ಅಲೆಕ್ಸಾ ಪ್ರತ್ಯೇಕ ಉತ್ಪನ್ನಗಳು. ಇವನ್ನು ವೈಫೈ ನೆಟ್​ವರ್ಕ್​ಗೆ ಅಳವಡಿಸಿದರೆ ನಾವು ಕೇಳಿದ ಪ್ರಶ್ನೆಗೆ ಇದು ಉತ್ತರಿಸುತ್ತದೆ. ಬೆಂಗಳೂರಿನಲ್ಲಿ ಸದ್ಯ ಉಷ್ಣಾಂಶ ಎಷ್ಟಿದೆ ಎಂದರೆ ಲಭ್ಯವಿರುವ ಮಾಹಿತಿಗಳನ್ನು ಹುಡುಕಿ ನಿಖರವಾಗಿ ಉತ್ತರಿಸುತ್ತದೆ. ಇನ್ನು ಸಿರಿ ಆ್ಯಪ್​ಲ್​ನ ಉತ್ಪನ್ನಗಳಲ್ಲಿರುವ ಶ್ರೇಷ್ಟ ಸೇವೆಯಾಗಿದೆ. ಇದೂ ಕೂಡ ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ತನ್ನಲ್ಲಿರುವ ಉತ್ತರವನ್ನು ನೀಡುತ್ತದೆ. ಉತ್ತರಗಳು ಫೋನ್​ನಲ್ಲ ಲಭ್ಯವಿರುವ ಅಪ್​ಡೇಟ್​ಗಳು ಹಾಗೂ ಇಂಟರ್​ನೆಟ್​ನಲ್ಲಿರುವ ಮಾಹಿತಿಗಳನ್ನು ಆಧರಿಸಿರುತ್ತವೆ.

Intro:Body:

ಎಲೆಕ್ಸಾವನ್ನು ಹಿಂದಿಕ್ಕಿದ ಗೂಗಲ್​ ಅಸಿಸ್ಟಂಟ್​: ಮತ್ತೆ ಮುಂಚೂಣಿ ಸಾಧಿಸಿದ ಆಪಲ್ ಸೀರಿ

ಸ್ಯಾನ್ ಫ್ರಾನ್ಸಿಸ್ಕೋ: ಡಿಜಿಟಲ್ ಅಸಿಸ್ಟೆಂಟ್‌ಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾವನ್ನು ಮತ್ತೊಮ್ಮೆ ಹಿಂದಿಕ್ಕಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಆಪಲ್ ಸೀರಿ ಮುಂಚೂಣಿಯಲ್ಲಿದೆ.

ರಿಸರ್ಚ್-ಲಿಂಕ್ಡ್​ ವೆಂಚರ್ ಕ್ಯಾಪಿಟಲ್ ಸಂಸ್ಥೆ ಲೂಪ್ ವೆಂಚರ್‌ನ ವಾರ್ಷಿಕ ಪ್ರಯೋಗದಲ್ಲಿ ಲಭಿಸಿರುವ ಮಾಹಿತಿಯ ಪ್ರಕಾರ, ಸಂಶೋಧನಾ ದಳವು ಪ್ರಮುಖ ಡಿಜಿಟಲ್​ ಅಸಿಸ್ಟಂಟ್​ಗಳಾದ- ಗೂಗಲ್​ ಅಸಿಸ್ಟಂಟ್, ಎಲೆಕ್ಸಾ, ಸೀರಿಗೆ ತಲಾ 800 ಪ್ರಶ್ನೆಗಳನ್ನು ಕೇಳಿತ್ತು. ಅದರಲ್ಲಿ ಗೂಗಲ್​ ಅಸಿಸ್ಟಂಟ್​ ಪ್ರತಿಯೊಂದು ಪ್ರಶ್ನೆಯನ್ನು ಅರ್ಥೈಸಿಕೊಳ್ಳುವಲ್ಲಿ ಗೆದ್ದಿದ್ದು, ಶೇ. 92.3ರಷ್ಟು ಸರಿಯಾದ ಉತ್ತರ ನೀಡಿದೆ. ಸಿರಿ ಎರಡು ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ, ಎಲೆಕ್ಸಾ ಕೇವಲ ಒಂದು ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ.

ಹೌದು, 2018ರಲ್ಲಿ ಕೇಳಿದ್ದ ಒಟ್ಟು ಪ್ರಶ್ನೆಗಳಿಗೆ ಗೂಗಲ್​ ಅಸಿಸ್ಟಂಟ್​ ಶೇ. 86 ರಷ್ಟು, ಸೀರಿ ಶೇ.79 ಮತ್ತು ಎಲೆಕ್ಸಾ ಶೇ. 61 ರಷ್ಟು ನಿಖರವಾಗಿ ಉತ್ತರಿಸಿದ್ದವು. ಇನ್ನೂ ಈ ಬಾರಿ ಗೂಗಲ್​ ಅಸಿಸ್ಟಂಟ್​ ಶೇ. 93 ರಷ್ಟು ಸರಿ ಉತ್ತರ ನೀಡಿದರೆ, ಸೀರಿ ಶೇ.83 ಮತ್ತು ಎಲೆಕ್ಸಾ ಶೇ. 80ರಷ್ಟು ನಿಖರವಾಗಿ ಉತ್ತರಿಸಿವೆ.

ಇನ್ನೂ, ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್ ಸ್ಪೀಕರ್​ ಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದ್ದು, ಎರಡರ ತಂತ್ರಜ್ಞಾನವು ಒಂದೇ ಆಗಿದ್ದರೂ, ಎರಡನ್ನೂ ವಿಭಿನ್ನವಾಗಿ ಬಳಸಲಾಗುತ್ತದೆ ಎಂದು ವರದಿ ತಿಳಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.