ETV Bharat / international

ಹೆಲಿಕಾಪ್ಟರ್ ಅಪಘಾತ : ನಾಲ್ವರು ದುರ್ಮರಣ - ಹೆಲಿಕಾಪ್ಟರ್ ಅಪಘಾತದಲ್ಲಿ ನಾಲ್ವರು ಸಾವು

ಕ್ಯಾಲಿಫೋರ್ನಿಯಾದ ಕೊಲುಸಾ ಕೌಂಟಿಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

helicopter crash
ಹೆಲಿಕಾಪ್ಟರ್ ಅಪಘಾತ
author img

By

Published : Aug 2, 2021, 5:04 PM IST

ಕ್ಯಾಲಿಫೋರ್ನಿಯಾ: ಹೆಲಿಕಾಪ್ಟರ್ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದ ಕೊಲುಸಾ ಕೌಂಟಿಯಲ್ಲಿ ನಡೆದಿದೆ. ಈ ಕುರಿತಂತೆ ಸ್ಥಳೀಯ ಜಿಲ್ಲಾಧಿಕಾರಿಗಳ ಇಲಾಖೆ ಮಾಹಿತಿ ನೀಡಿದೆ.

ಭಾನುವಾರ ಮಧ್ಯಾಹ್ನ 1:15 ರ ಸುಮಾರಿಗೆ ರಾಬಿನ್ಸನ್ ಆರ್ 66 ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ ನಾಲ್ಕು ಜನರು ಅಸುನೀಗಿದ್ದಾರೆ ಎಂದು ಕೊಲುಸಾ ಕೌಂಟಿ ಶೆರಿಫ್ ವಿಭಾಗವು ದೃಢಪಡಿಸಿದೆ.

ಓದಿ: ಕೋವ್ಯಾಕ್ಸಿನ್ ಡೆಲ್ಟಾ ಪ್ಲಸ್​ ರೂಪಾಂತರಿ ವಿರುದ್ಧ ಪರಿಣಾಮಕಾರಿ: ಐಸಿಎಂಆರ್

ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ತನ್ನ ಟ್ವಿಟರ್​​ನಲ್ಲಿ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.