ETV Bharat / international

ಭೀಕರ ದೃಶ್ಯದ ವಿಡಿಯೋ : ಬ್ರೆಜಿಲ್‌ನಲ್ಲಿ ಸರೋವರದ ಬೆಟ್ಟ ಕುಸಿದು ಐವರು ಸಾವು, 20 ಮಂದಿ ನಾಪತ್ತೆ - ಫರ್ನಾಸ್ ಸರೋವರ ಪ್ರವಾಸ

ಬ್ರೆಜಿಲ್​ನ ಸರೋವರವೊಂದರ ಬಳಿ ಬೆಟ್ಟ ಕುಸಿದು ಐವರು ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.

Five killed in hill collapse near at a lake in Brazil
Brazil lake Tragedy: ಸರೋವರದ ಬಳಿ ಕುಸಿದ ಬೆಟ್ಟ, ಐವರ ಸಾವು, 20 ನಾಪತ್ತೆ
author img

By

Published : Jan 9, 2022, 12:08 PM IST

Updated : Jan 9, 2022, 3:36 PM IST

ರಿಯೊ ಡಿ ಜನೈರೊ(ಬ್ರೆಜಿಲ್): ಸರೋವರವೊಂದರ ಬಳಿ ಬೆಟ್ಟ ಕುಸಿದು ಐದು ಮಂದಿ ಸಾವನ್ನಪ್ಪಿದ್ದು 20 ಮಂದಿ ನಾಪತ್ತೆಯಾಗಿರುವ ಘಟನೆ ಬ್ರೆಜಿಲ್​ನ ಕ್ಯಾಪಿಟೋಲಿಯೊ ಪ್ರಾಂತ್ಯದ ಪ್ರವಾಸಿ ಸ್ಥಳವೊಂದರ ಬಳಿ ನಡೆದಿದೆ.

ಮಿನಾಸ್ ಗೆರೈಸ್ ರಾಜ್ಯದಲ್ಲಿರುವ ಫರ್ನಾಸ್ ಎಂಬ ಸರೋವರಕ್ಕೆ ಪ್ರವಾಸಕ್ಕೆಂದು ಬಂದು ಬೋಟಿಂಗ್ ಮಾಡುತ್ತಿದ್ದವರ ಮೇಲೆ ಬೆಟ್ಟ ಕುಸಿಯಿತು. ಸದ್ಯಕ್ಕೆ ಐವರು ಸಾವನ್ನಪ್ಪಿ 32 ಮಂದಿಗೆ ಗಾಯವಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • Terrible video out of Lake Furnas, #Brazil, captures the moment a canyon cliff collapses on boats full of tourists. Latest reports say at least 5 dead 20 missing.pic.twitter.com/03LrGX0kIL

    — Albert Solé  (@asolepascual) January 8, 2022 " class="align-text-top noRightClick twitterSection" data=" ">

ಶನಿವಾರ ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ಮೊದಲಿಗೆ ಸಣ್ಣ ಸಣ್ಣ ಬಂಡೆಗಳು ಉರುಳಿದ್ದು, ಸ್ವಲ್ಪ ಸಮಯದ ನಂತರ ಮೂರು ಬೋಟ್​ಗಳ ಮೇಲೆ ಬೆಟ್ಟ ಕುಸಿದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಯ ಹುಟ್ಟಿಸುವಂತಿದೆ.

ಫರ್ನಾಸ್ ಸರೋವರದ ಬಳಿಯಿರುವ ಕಲ್ಲಿನ ರಚನೆಗಳು, ಗುಹೆಗಳು ಮತ್ತು ಜಲಪಾತಗಳನ್ನು ನೋಡುವ ಸಲುವಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ವೀಕೆಂಡ್ ಆದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿದ್ದರು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಸಿಖ್‌ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ; ಟರ್ಬನ್ ತೆಗೆದು ಹಾಕಿ ಅವಮಾನ

Last Updated : Jan 9, 2022, 3:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.