ರಿಯೊ ಡಿ ಜನೈರೊ: ಕೊರೊನಾ ಸೋಂಕಿತರ ಚಿಕಿತ್ಸೆಗೆಂದು ಬ್ರೆಜಿಲ್ ಸರ್ಕಾರ ನಿರ್ಮಿಸಿರುವ ನೂತನ ಆಸ್ಪತ್ರೆಯನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು.
ಖಾಸಗಿ ಸಹಭಾಗಿತ್ವದಲ್ಲಿ 19 ದಿನಗಳಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು 10 ತೀವ್ರ ನಿಗಾ ಘಟಕಗಳೊಂದಿಗೆ 30 ಹಾಸಿಗೆಗಳನ್ನು ಈ ಆಸ್ಪತ್ರೆ ಒಳಗೊಂಡಿದೆ.
ಮುಂದಿನ ದಿನಗಳಲ್ಲಿ 100 ತೀವ್ರ ನಿಗಾ ಘಟಮ ಸೇರಿ 200 ಹಾಸಿಗೆಗಳೊಂದಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ಸರ್ಕಾರ ತಿಳಿಸಿದೆ. ಸದ್ಯ, ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿ ಸೇರಿ 1,000 ಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸಲಿದ್ದಾರೆ. ನೂತನ ಆಸ್ಪತ್ರೆ ರೆಸಿಪಿರೇಟರ್ಸ್, ಟೋಮೋಗ್ರಫಿ, ರೇಡಿಯೋಲಜಿ, ಅಲ್ಟ್ರಾಸೌಂಡ್ ಸೇರಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.