ವಾಷಿಂಗ್ಟನ್ : ಶೇ. 99 ಕೊರೊನಾ ವೈರಸ್ ಪ್ರಕರಣಗಳು ಅಪಾಯಕಾರಿಯಲ್ಲ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಬೆಂಬಲಿಸಲು ಆಹಾರ ಮತ್ತು ಡ್ರಗ್ ಆಡಳಿತ ಆಯುಕ್ತ ಡಾ. ಸ್ಟೀಫನ್ ಹಾನ್ ನಿರಾಕರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಸಿರುವ ಅವರು, ಅವರು (ಅಧ್ಯಕ್ಷ) ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯಲು ಹೋಗುವುದಿಲ್ಲ. ಸರ್ಕಾರದ ಮಾಹಿತಿಯು, ಇದು ಗಂಭೀರ ಸಮಸ್ಯೆ ಎಂದು ಸ್ಪಷ್ಟವಾಗಿ ತೋರಿಸುತ್ತಿದೆ. ಆದ್ದರಿಂದ ಜನರು ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದಿದ್ದಾರೆ.
ಯುಎಸ್ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಮೂಲಕ ಶೇ.99 ರಷ್ಟು ಸೋಂಕಿನ ಪ್ರಕರಣಗಳು ಅಪಾಯಕಾರಿಯಲ್ಲ ಎಂಬುವುದನ್ನು ನಾವು ತೋರಿಸುತ್ತಿದ್ದೇವೆ ಎಂದು ಜುಲೈ 4 ರಂದು ಟ್ರಂಪ್ ತಪ್ಪು ಹೇಳಿಕೆ ನೀಡಿದ್ದರು.
ಇನ್ನು, ಟ್ರಂಪ್ ಹೇಳಿಕೆ ತಪ್ಪು ಮತ್ತು ಅಪಾಯಕಾರಿ ಎಂದು ಟೆಕ್ಸಾಸ್ನ ಆಸ್ಟಿನ್ ಮೇಯರ್ ಸ್ಟೀವ್ ಆಡ್ಲರ್ ಹೇಳಿದ್ದು, ವಾಷಿಂಗ್ಟನ್‌ನಿಂದ ಹೊರಬರುವ ಅಸ್ಪಷ್ಟ ಸಂದೇಶಕ್ಕಿಂತ ಸ್ಥಳೀಯ ಅಧಿಕಾರಿಗಳ ಸಾರ್ವಜನಿಕ ಸುರಕ್ಷತಾ ಮಾರ್ಗದರ್ಶನಗಳನ್ನು ಪಾಲಿಸಿ ಎಂದಿದ್ದಾರೆ.
ಕೋವಿಡ್ ಜೊತೆಗೆ ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶೇ. 20 ರಷ್ಟು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.