ಸೌಪೌಲ್ (ಬ್ರೆಜಿಲ್): ರ‍್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಹಿಂದಿರುಗುತ್ತಿದ್ದ ವೇಳೆ ಮಾಡೆಲ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಎಲ್ಲರನ್ನೂ ಬೆರಗುಗೊಳಿಸುವಂತೆ ಮಾಡಿದೆ.
ಬ್ರೆಜಿಲ್ನ ಸೌಪೌಲ್ನಲ್ಲಿ ಫ್ಯಾಷನ್ ವೀಕ್ ಆಯೋಜಿಸಲಾಗಿತ್ತು. 26 ವರ್ಷದ ಬ್ರೆಜಿಲ್ನ ಮಾಡೆಲ್ ಟೆಲ್ಸ್ ಸೋರ್ಸ್ ಈ ಫ್ಯಾಷನ್ ವೀಕ್ನಲ್ಲಿ ಪಾಲ್ಗೊಂಡಿದ್ದನು. ರ‍್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಹಿಂದಿರುಗುತ್ತಿದ್ದ ವೇಳೆ ಸಡನ್ ಆಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದರು, ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರು ಟೆಲ್ಸ್ ಸೊರೆಸ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಪ್ರೇಕ್ಷಕರು ನೋಡು ನೋಡುತ್ತಲೇ ಆ ಯುವಕ ರ‍್ಯಾಂಪ್ ಮೇಲೆ ಪ್ರಾಣ ಬಿಟ್ಟಿದ್ದನು.
ಇನ್ನು ಪ್ರಾಥಮಿಕ ವರದಿ ಪ್ರಕಾರ ಆತ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿಲ್ಲ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಆತನ ಸಾವಿನ ರಹಸ್ಯ ಹೊರಬಿಳಲಿದೆ. ಆತನ ಕುಟುಂಬಕ್ಕೆ ಫ್ಯಾಷನ್ ವೀಕ್ ಆಯೋಜಿಸಿದ್ದ ನಿರೂಪಕರು ಸೇರಿದಂತೆ ಅನೇಕರು ಸಾಂತ್ವನ ಹೇಳಿದ್ದಾರೆ.