ETV Bharat / international

ಭಾರತ ಭೇಟಿ ಬಗ್ಗೆ ಟ್ರಂಪ್​ ಪತ್ನಿಯ ಉತ್ಸಾಹ ಎಂಥಹದ್ದು ನೀವೇ ನೋಡಿ!

ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೊತೆ ಭಾರತಕ್ಕೆ ಭೇಟಿ ನೀಡಲು ನಾನು ಉತ್ಸುಕಳಾಗಿದ್ದೇನೆ. ಉಭಯ ದೇಶಗಳ ನಡುವಿನ ನಿಕಟ ಸಂಬಂಧವನ್ನು ಕೊಂಡಾಡಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಭಾರತ ಭೇಟಿಯ ಬಗ್ಗೆ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪತ್ನಿ ಮೆಲಾನಿಯ ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

ಮೆಲಾನಿಯ ಟ್ರಂಪ್​
ಮೆಲಾನಿಯ ಟ್ರಂಪ್​
author img

By

Published : Feb 13, 2020, 10:18 AM IST

ವಾಷಿಂಗ್ಟನ್ (ಯುಎಸ್​) : ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೊತೆ ಭಾರತಕ್ಕೆ ಭೇಟಿ ನೀಡಲು ನಾನು ಉತ್ಸುಕಳಾಗಿದ್ದೇನೆ ಎಂದು ಅಮೆರಿಕದ​ ಪ್ರಥಮ ಮಹಿಳೆ ಹಾಗೂ ಡೊನಾಲ್ಡ್​ ಟ್ರಂಪ್​ ಪತ್ನಿ ಮೆಲಾನಿಯ ಟ್ರಂಪ್​ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮೆಲಾನಿಯ ಟ್ರಂಪ್​, ಭಾರತಕ್ಕೆ ಭೇಟಿ ನೀಡುತ್ತಿರುವುದು ತಮನ್ನು ಉಲ್ಲಸಿತಗೊಳಿಸಿದೆ. ಉಭಯ ದೇಶಗಳ ನಡುವಿನ ನಿಕಟ ಸಂಬಂಧವನ್ನು ಅರಿಯಲು ಯುಎಸ್​ ಪ್ರಥಮ ಮಹಿಳೆಯಾಗಿ ನನಗೆ ಇದೊಂದು ಉತ್ತಮ ಅವಕಾಶ. ಈ ರೀತಿ ಆಹ್ವಾನ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಟ್ವೀಟ್​ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಯುಎಸ್​ ಪ್ರಧಾನಿ ಮತ್ತು ಪ್ರಥಮ ಮಹಿಳೆ ಭಾರತಕ್ಕೆ ಭೇಟಿ ನೀಡುತ್ತಿರುವುದು ಬಹಳ ವಿಶೇಷವಾದದ್ದು. ಭಾರತ ಅಥಿತಿಗಳಿಗೆ ಅವಿಸ್ಮರಣೀಯ ಸ್ವಾಗತ ನೀಡಲಿದೆ. ಈ ಭೇಟಿ ಬಹಳ ವಿಶೇಷವಾದದ್ದು ಮತ್ತು ಭಾರತ-ಯುಎಸ್ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದರು.

  • Extremely delighted that @POTUS @realDonaldTrump and @FLOTUS will visit India on 24th and 25th February. India will accord a memorable welcome to our esteemed guests.

    This visit is a very special one and it will go a long way in further cementing India-USA friendship.

    — Narendra Modi (@narendramodi) February 12, 2020 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯಿಸಿದ ಮೆಲಾನಿಯ ಟ್ರಂಪ್​, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೊತೆ ಭಾರತಕ್ಕೆ ಭೇಟಿ ನೀಡಲು ನಾನು ಉತ್ಸುಕಳಾಗಿದ್ದೇನೆ. ಉಭಯ ದೇಶಗಳ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಬಲ ಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದಿದ್ದಾರೆ. ಫೆ. 24ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪತ್ನಿ ಮೆಲಾನಿಯಾ ಟ್ರಂಪ್​ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಅಹಮದಾಬಾದ್​ ಮತ್ತು ದೆಹಲಿ ನಗರಗಳಿಗೆ ಭೇಟಿ ನೀಡಲಿದ್ದಾರೆ. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.