ETV Bharat / international

ಕ್ವಾಡ್ ನಾಯಕರೊಂದಿಗಿನ ಚರ್ಚೆ ಫಲಪ್ರದವಾಗಿದೆ: ಪ್ರಧಾನಿ ಮೋದಿ ಟ್ವೀಟ್​​ - ಪ್ರಧಾನಿ ಮೋದಿ ಟ್ವೀಟ್​​

ಅಮೆರಿಕದಲ್ಲಿ ನಡೆದ ಕ್ವಾಡ್ ನಾಯಕರ ಒಕ್ಕೂಟ ನಾಯಕರ ಮೊದಲ ಸಭೆಯು ಫಲಪ್ರದವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Discussions with Quad leaders were extensive, productive, says PM Modi
ಕ್ವಾಡ್ ನಾಯಕರೊಂದಿಗಿನ ಚರ್ಚೆ ಫಲಪ್ರದವಾಗಿದೆ: ಪ್ರಧಾನಿ ಮೋದಿ ಟ್ವೀಟ್​​
author img

By

Published : Sep 25, 2021, 5:01 AM IST

ವಾಷಿಂಗ್ಟನ್, ಅಮೆರಿಕ: ಮೊದಲ ಕ್ವಾಡ್ ಒಕ್ಕೂಟದ ನಾಯಕರ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರೊಂದಿಗೆ ನಡೆಸಿದ ಚರ್ಚೆ ಅತ್ಯಂತ ಫಲಪ್ರದವಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರು ಪ್ರಧಾನಿ ಮೋದಿ ಕ್ವಾಡ್ ಮೀಟಿಂಗ್​ನಲ್ಲಿ ಭಾಗವಹಿಸಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕ ಶ್ವೇತ ಭವನದಲ್ಲಿ ಈ ಸಭೆ ನಡೆಸಿದ್ದು, ಸಭೆಯ ನಂತರ ಟ್ವೀಟ್​​ ಮಾಡಿದ್ದು, ಟ್ವೀಟ್​ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.

ಕ್ವಾಡ್ ನಾಯಕರ ಸಭೆಯಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ ಮಾತನಾಡಿದ್ದ ಅವರು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬೇಕೆಂದು, ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ರಾಷ್ಟ್ರಗಳು ಪರಸ್ಪರ ಸಹಕಾರ ನೀಡಬೇಕೆಂದು ಪ್ರತಿಪಾದಿಸಿದರು.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವ್ಯಾಪಾರ, ಕೋವಿಡ್ ಸಾಂಕ್ರಾಮಿಕ, ಹವಾಮಾನ ವೈಪರಿತ್ಯ ಮುಂತಾದವುಗಳ ಚರ್ಚೆ ನಡೆಸಲಾಗಿತ್ತು.

ಜೋ ಬೈಡನ್ ಮಾತ್ರವಲ್ಲದೇ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರೊಂಗಿಗೆ ಕೂಡಾ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗಿನ ಕ್ವಾಡ್​​ ಸಭೆಗೆ ಪ್ರಧಾನಿ ಗೈರು ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.