ETV Bharat / international

ಡೆಮಾಕ್ರಟಿಕ್ ಅಭ್ಯರ್ಥಿಗಳ ಚುನಾವಣೆ : ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಗೆಲುವು? - ಸೂಪರ್​ ಮಂಗಳವಾರ

ಸೂಪರ್​ ಮಂಗಳವಾರದ ಹೋರಾಟ ಎಂದೇ ಕರೆಯಲಾಗುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗೆ ಚುನಾವಣೆ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದ್ದು, ಪ್ರಚಾರ ಭರ್ಜರಿಯಾಗೇ ಸಾಗುತ್ತಿದೆ. ಲೋವಾ ಕಾಕಸ್​​​ ಅಂದರೆ ಆಯಾಯ ಪಕ್ಷಗಳ ಆಂತರಿಕ ಚುನಾವಣೆ ಇದಾಗಿದ್ದು, ಇಲ್ಲಿ ಹೆಚ್ಚಿನ ಜನಪ್ರಿಯ ಮತಗಳನ್ನ ಪಡೆದವರು ಅಧ್ಯಕ್ಷೀಯ ಅಭ್ಯರ್ಥಿ ಆಗಿ ಆಯ್ಕೆ ಆಗಲಿದ್ದಾರೆ.

triangular contest ahead of 'Super Tuesday'
'ಸೂಪರ್ ಮಂಗಳವಾರ'ಕ್ಕೆ ತ್ರಿಕೋನ ಸ್ಪರ್ಧೆ
author img

By

Published : Mar 3, 2020, 1:01 PM IST

ವಾಷಿಂಗ್ಟನ್ (ಅಮೆರಿಕ) : ಡೆಮಾಕ್ರಟಿಕ್ ಪಕ್ಷ ತನ್ನ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಇದೀಗ ಈ ಸೂಪರ್​ ಮಂಗಳವಾರದ ಹಣಾಹಣಿ ಎಂದೇ ಬಿಂಬಿತವಾದ ಲೋವಾ ಕಾಕಸ್​ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಎದುರಾಳಿಯಾಗಲು, ಡೆಮಾಕ್ರಟಿಕ್​ ಪಕ್ಷದ ಮಾಜಿ ಉಪಾಧ್ಯಕ್ಷ ಜೋ ಬಿಡನ್, ಸೆನೆಟರ್ ಬರ್ನಿ ಸ್ಯಾಂಡರ್ಸ್ ಮತ್ತು ನ್ಯೂಯಾರ್ಕ್ ಮಾಜಿ ಮೇಯರ್ ಮೈಕೆಲ್ ಬ್ಲೂಮ್​​ಬರ್ಗ್​​ ಅವರ ಮಧ್ಯೆ ತ್ರಿಕೋನ ಹಣಾಹಣಿ ಏರ್ಪಟ್ಟಿದೆ. ಈ ಚುನಾವಣೆಯಿಂದ ಭಾರತೀಯ ಮೂಲದ ಮಾಜಿ ಮೇಯರ್​​​ ಪೀಟೆ ಬುಟ್ಟಿಗೇಗ್​​ ಹಿಂದೆ ಸರಿದಿದ್ದು, ಮೂವರ ನಡುವೆ ಆಯ್ಕೆಗೆ ಹಣಾಹಣಿ ನಡೆಯುತ್ತಿದೆ.

ಈ ಬಾರಿ ಅಧ್ಯಕ್ಷ ಗಾದಿಗೆ ಏರಲು ಹವಣಿಸುತ್ತಿರುವ 78 ವರ್ಷದ ಬಿಲಿಯನೇರ್ ಉದ್ಯಮಿ ಬ್ಲೂಮ್‌ಬರ್ಗ್ ಭಾರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಯಲ್ಲಿ ಅವರು, ಲಕ್ಷಾಂತರ ಡಾಲರ್​ ಖರ್ಚು ಮಾಡಿ ಜಾಹೀರಾತು ನೀಡಿ ಮತದಾರರನ್ನು ಸೆಳೆಯುತ್ತಿದ್ದಾರೆ.

ಅಲಬಾಮಾ, ಅರ್ಕಾನ್ಸಾಸ್, ಕ್ಯಾಲಿಫೋರ್ನಿಯಾ, ಕೊಲೊರಾಡೋ, ಮೈನೆ, ಮ್ಯಾಸಚೂಸೆಟ್ಸ್, ಮಿನ್ನೇಸೋಟ, ನಾರ್ತ್ ಕೆರೊಲಿನಾ, ಒಕ್ಲಹೋಮ, ಟೆನ್ನೆಸ್ಸೀ, ಟೆಕ್ಸಾಸ್, ಉತಾಹ್, ವರ್ಮೊಂಟ್ ಮತ್ತು ವರ್ಜೀನಿಯಾ ರಾಜ್ಯಗಳಲ್ಲಿ ಈ ಚುನಾವಣೆಗೆ ಮತದಾನ ನಡೆಯಲಿದೆ. ದೇಶದ 50 ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳು ಈಗಾಗಲೇ ಮತ ಚಲಾಯಿಸಿವೆ. ಮಾರ್ಚ್ 3 ಇಡೀ ಅಧ್ಯಕ್ಷೀಯ ಚುನಾವಣೆ ಪ್ರಾಥಮಿಕ ಪ್ರಕ್ರಿಯೆಯ ಅತಿದೊಡ್ಡ ದಿನವಾಗಿದ್ದು, ಹತ್ತು ಲಕ್ಷ ಅಮೆರಿಕನ್ನರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ಇದೇ ಮೊದಲ ಬಾರಿಗೆ ಶ್ವೇತಭವನದ ಸ್ಪರ್ಧೆಗೆ ಅಡಿ ಇಟ್ಟಿರುವ ಬ್ಲೂಮ್​ಬರ್ಗ್​, 78 ವರ್ಷದ ಸ್ಯಾಂಡರ್ಸ್ ಸತತ ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು 77 ವರ್ಷದ ಬಿಡೆನ್ ತಮ್ಮ ಮೂರನೇ ಬಾರಿ ತಮ್ಮ ಲಕ್​​ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಈ ವರೆಗೆ ನಡೆದ ಚುನಾವಣೆಯಲ್ಲಿ ದಕ್ಷಿಣ ಕೆರೊಲಿನಾದಲ್ಲಿ ಗೆಲುವು ಸಾಧಿಸಿರುವ ಬಿಡೆನ್, ತಮ್ಮ ಬಳಿ 54 ಪ್ರತಿನಿಧಿಗಳನ್ನು ಹೊಂದಿದ್ದಾರೆ.

ಸ್ಯಾಂಡರ್ಸ್ ನ್ಯೂ ಹ್ಯಾಂಪ್‌ಶೈರ್ ಮತ್ತು ನೆವಾಡಾದಲ್ಲಿ ನಡೆದ ಪ್ರಾಥಮಿಕ ಸ್ಪರ್ಧೆ ಗೆದ್ದು ಮುನ್ನಡೆ ಪಡೆದುಕೊಂಡಿದ್ದಾರೆ. ಸ್ಯಾಂಡರ್​ ಬಳಿ 58 ಡೆಲಿಗೆಟ್ಸ್​ ಮತಗಳು ಇವೆ. ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿದ ಬುಟ್ಟಿಗೇಗ್​​ 26 ಜನಪ್ರಿಯ ಮತಗಳನ್ನ ಪಡೆದಿದ್ದರು.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ಆಯ್ಕೆಯಾದ ಹಿಂದೂ ಸೆನೆಟರ್​ ತುಳಸಿ ಗಬ್ಬಾರ್ಡ್ ಸಹ ಸ್ಪರ್ಧೆಯಲ್ಲಿದ್ದರೂ ಅವರ ಹೋರಾಟ ಅಂತ್ಯಗೊಂಡಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.