ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಯುಎಸ್ ಸರ್ಕಾರ ಜನರಿಗಾಗಿ 1.9 ಟ್ರಿಲಿಯನ್ ಕೋವಿಡ್ -19 ಪರಿಹಾರ ಮಸೂದೆ ಘೋಷಣೆ ಮಾಡಿದ್ದು, ಇದೀಗ ಅಂಗೀಕಾರಗೊಂಡಿದೆ.
ಬೈಡೆನ್ ಸರ್ಕಾರ ಈ ಹಿಂದೆ ಕೊರೊನಾ ಪ್ರೋತ್ಸಾಹ ಧನವಾಗಿ 2 ಸಾವಿರ ಕೋಟಿ ಪರಿಹಾರ ನೀಡಿತ್ತು. ಇದೀಗ ಎರಡನೇ ಹಂತವಾಗಿ ಈ ಮಸೂದೆ ಪಾಸ್ ಮಾಡಲಾಗಿದೆ.
ಈ ಪರಿಹಾರ ಘೋಷಣೆಯಿಂದ ಅನೇಕ ನಿರುದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ತುರ್ತು ಸಂದರ್ಭದಲ್ಲಿ ವಾರಕ್ಕೆ 300 ಡಾಲರ್ ಒದಗಿಸಲಾಗುತ್ತದೆ. ಮತ್ತು 1400 ಡಾಲರ್ನ್ನು ವಯಸ್ಕರಿಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಬೈಡನ್ ಆಡಳಿತಕ್ಕೆ ಬಂದ 7 ವಾರಗಳಲ್ಲಿ ಈ ಘೋಷಣೆ ಮಾಡಲಾಗಿದೆ. ಸದ್ಯ ಅಮೆರಿಕದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.