ETV Bharat / international

ವಿಚಿತ್ರ ಆದರೂ ಸತ್ಯ... ಈ ಮಾಡೆಲ್​​ನ ಪತಿ ಈಗ 8 ತಿಂಗಳ ಗರ್ಭಿಣಿ​...! - ಕೊಲಂಬಿಯಾದ ಪತಿ ಪ್ರಗ್ನೆಂಟ್​

8 ತಿಂಗಳ ಗರ್ಭಿಣಿ ಆದ ಕೊಲಂಬಿಯಾದ ಮಾಡಲ್​ ಒಬ್ಬರ ಪತಿ. ಮಗುವನ್ನು ಬರಮಾಡಿಕೊಳ್ಳುವ ಏರ್ಪಾಡು ಮಾಡಿಕೊಳ್ಳುತ್ತಿದ್ದಾರೆ ಕುಟುಂಬ ಸದಸ್ಯರು. ಹುಟ್ಟುವ ಗಂಡು ಮಗುವಿಗೆ 'ಏರಿಯಲ್' ಎಂದು ಹೆಸರನ್ನೂ ಇಟ್ಟಿರುವ ದಂಪತಿ. ಈ ಜೋಡಿಯ ಸ್ಟೋರಿ ಬಹಳ ಕುತೂಹಲಕಾರಿ.

Colombia transgender husband pregnant, ಕೊಲಂಬಿಯಾದ ಮಾಡಲ್​ ಪತಿ ಪ್ರಗ್ನೆಂಟ್
ವಿಚಿತ್ರ ಆದ್ರೂ ಸತ್ಯ... ಈ ಮಾಡಲ್​​ನ ಪತಿ ಪ್ರಗ್ನೆಂಟ್​...!
author img

By

Published : May 28, 2020, 3:45 PM IST

Updated : May 28, 2020, 4:50 PM IST

ಕೊಲಂಬಿಯಾ: ತಾಯ್ತನ ಎಂಬುದು ಅವರ್ಣನೀಯ ಅನುಭವ. ಅದನ್ನು ಅನುಭವಿಸಿಯೇ ತಿಳಿಯಬೇಕು. ಮಗುವಿಗೆ ಜನ್ಮ ನೀಡಿ ಅದನ್ನು ಬೆಳೆಸುವ ಪ್ರಕ್ರಿಯೆ ಕುತೂಹಲ, ಖುಷಿಯ ವಿಷಯ. ಆದರೆ ನಾವು ಹೇಳಲು ಹೊರಟಿರುವುದು ಸ್ವಲ್ಪ ವಿಭಿನ್ನ, ಕುತೂಹಲಕಾರಿ ಸ್ಟೋರಿ. ಕೊಲಂಬಿಯಾದ ಟ್ರಾನ್ಸ್​ಜೆಂಡರ್​ವೊಬ್ಬರು ಸದ್ಯದಲ್ಲೇ ತಾಯಿಯಾಗಲಿದ್ದಾರೆ. ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ.

ಟ್ರಾನ್ಸ್​ಜೆಂಡರ್​ ಮಾಡೆಲ್​ವೊಬ್ಬರು 'ಗರ್ಭಿಣಿ'ಯಾಗಿರುವ ತನ್ನ ಗಂಡನ ಹೊಟ್ಟೆಗೆ ಖುಷಿಯಿಂದ ಮುತ್ತು ನೀಡುವ ಹೃದಯಸ್ಪರ್ಶಿ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್​ ಮಾಡಿದ್ದಾರೆ. ಅಂದ ಹಾಗೆ ಟ್ರಾನ್ಸ್​ಜೆಂಡರ್ ಆಗಿರುವ ಈ ವ್ಯಕ್ತಿಗೆ ಈಗ 8 ತಿಂಗಳು.

Colombia transgender husband pregnant, ಕೊಲಂಬಿಯಾದ ಮಾಡಲ್​ ಪತಿ ಪ್ರಗ್ನೆಂಟ್
ಡನ್ನಾ ಸುಲ್ತಾನಾ ಪತಿ ಎಸ್ಟೆಬಿನ್ ಲಾಂಡ್ರ್ಯೂ

ಡನ್ನಾ ಸುಲ್ತಾನಾ ಮತ್ತು ಈಸ್ಟ್​ಬನ್​​ ಲಾಂಡ್ರೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿರುವ ಜೋಡಿ. ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಗುರುತಿಸಿಕೊಂಡವರು ಡನ್ನಾ ಸುಲ್ತಾನಾ. ಮಾಡೆಲ್​​ ಆಗಿರುವ ಡನ್ನಾ ಸುಲ್ತಾನಾ ಅವರೇ ಈಗ ಮಗುವಿನ ನಿರೀಕ್ಷೆಯಲ್ಲಿರೋದು. ಆದರೆ ತಾಯ್ತನದ ಖುಷಿ ಅನುಭವಿಸುತ್ತಿರುವುದು ಡನ್ನಾ ಅಲ್ಲ. ಬದಲಾಗಿ ಈಕೆಯ ಗಂಡ ಈಸ್ಟ್​​ಬಸ್​ ಲಾಂಡ್ರೋ. ಹೌದು, ಜನಿಸಿದಾಗ ಹೆಣ್ಣಾಗಿದ್ದು ನಂತರ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದ ಈಸ್ಟ್​​ಬನ್​ ಲಾಂಡ್ರೋ ತಾಯ್ತನದ ಎಲ್ಲ ಖುಷಿಯನ್ನು ಅನುಭವಿಸುತ್ತಿದ್ದಾರೆ.

'ಗರ್ಭಿಣಿ' ಪತಿಯೊಂದಿಗೆ ಡನ್ನಾ ಸುಲ್ತಾನಾ

2 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇರುವ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಡೆಲ್​ ಡನ್ನಾ ಸುಲ್ತಾನಾ ಹೃದಯ ತಟ್ಟುವ ಫೋಟೊವನ್ನು ಹಂಚಿಕೊಂಡಿದ್ದಾರೆ. 'Love Is Love' ಎಂಬ ಹ್ಯಾಶ್​ಟ್ಯಾಗ್​​ನಿಂದ ಈ ಖುಷಿಯ ವಿಷಯವನ್ನು ಡನ್ನಾ ಶೇರ್​ ಮಾಡಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಚಾರ ಏನೆಂದರೆ ಈಸ್ಟ್​​ಬನ್​​ ಲಾಂಡ್ರೋ ಸಹಜ ರೀತಿಯಲ್ಲೇ ಗರ್ಭ ಧರಿಸಿದ್ದಾರೆ ಅನ್ನೋದು.

8 ತಿಂಗಳಾಗುತ್ತಿದ್ದಂತೆ ಈಸ್ಟ್​​ಬನ್​ ಅವರನ್ನು ಡನ್ನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭದಲ್ಲಿರುವ ಮಗುವಿನ ಗಾತ್ರ ಸ್ವಲ್ಪ ದೊಡ್ಡದಿದೆ. ನೀವು ಆತಂಕಪಡಬೇಕಿಲ್ಲ ಎಂದು ಈ ಜೋಡಿಗೆ ವೈದ್ಯರು ಧೈರ್ಯ ಹೇಳಿದ್ದಾರೆ. ಮನೆಗೆ ಮರಳಿರುವ ಈ ಜೋಡಿ ಈಗ ಖುಷಿಯ ದಿನಕ್ಕಾಗಿ ಕಾಯುತ್ತಿದೆ. ತಮ್ಮ ಕುಟುಂಬ ಸದಸ್ಯರಿಗೂ ಈ ವಿಚಾರ ತಿಳಿಸಿರುವ ಡನ್ನಾ ಮತ್ತು ಈಸ್ಟ್​​ಬನ್​​ ಪುಟ್ಟ ಕಂದನ ಸ್ವಾಗತಕ್ಕೆ ಸಜ್ಜಾಗಿ ಎಂದು ಹೇಳಿದ್ದಾರೆ. ಹುಟ್ಟುವ ಗಂಡು ಮಗುವಿಗೆ ಈಗಾಗಲೇ ಹೆಸರನ್ನೂ ಇಟ್ಟಿದ್ದಾರೆ. ನಾವು ಮಗನನ್ನು 'ಏರಿಯಲ್'​​ ಎಂದು ಕರೆಯುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಈ ಇಬ್ಬರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ.

Last Updated : May 28, 2020, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.