ವಾಷಿಂಗ್ಟನ್: ಭಾರತದಲ್ಲಿನ ಆಧಾರ್ ವ್ಯವಸ್ಥೆಯ ಮಾಹಿತಿಯನ್ನು ಉಲ್ಲೇಖಿಸಿ, ಅದೇ ಮಾದರಿಯಲ್ಲಿ ಡಿಜಿಟಲ್ ಸಿಸ್ಟಂ ರೂಪಿಸಿ ಎಂದು ಅಮೆರಿಕದ ತಜ್ಞರು ಅಮೆರಿಕ ನಾಯಕರಿಗೆ ಶಿಫಾರಸು ಮಾಡಿದ್ದಾರೆ.
ಡಿಜಿಟಲ್ ಗುರುತಿನ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಮತ್ತು ಪ್ರಯೋಜನವಾಗಲಿದೆ ಎಂದು ಭಾರತದಲ್ಲಿನ ಆಧಾರ್ ವ್ಯವಸ್ಥೆಯನ್ನು ಉಲ್ಲೇಖಿಸಿ ಅಮೆರಿಕದ ತಜ್ಞರು ತಿಳಿಸಿದ್ದಾರೆ..
ನೊಟ್ರೆ ಡೇಮ್-ಐಬಿಎಂ ಟೆಕ್ನಾಲಜಿ ಎಥಿಕ್ಸ್ ಲ್ಯಾಬ್‌ನ ಸಂಸ್ಥಾಪಕ, ನಿರ್ದೇಶಕ ಪ್ರೊ. ಎಲಿಝಬೆತ್ ರೆನಿಯರ್ಸ್, ಡಿಜಿಟಲ್ ಯುಗದಲ್ಲಿ ನಾವು ನಿಜವಾಗಿಯೂ ಎಲ್ಲರನ್ನೂ ಒಳಗೊಂಡ ವ್ಯವಸ್ಥೆಯನ್ನು ವಿನ್ಯಾಸಗೊಳಿಸಬೇಕಾಗಿದೆ ಮತ್ತು ಹೆಚ್ಚಿನ ಜನರೊಂದಿಗೆ, ಜನರಿಗಾಗಿ ಇದು ಕೆಲಸ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಯೊಂದರಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ರೆನಿಯರ್ಸ್, ಭಾರತದಲ್ಲಿ ಆಧಾರ್ ವ್ಯವಸ್ಥೆ ಅನುಷ್ಠಾನಗೊಳಿಸಿದ ವೇಳೆ ಆದ ಅನುಭವ ಉಲ್ಲೇಖಿಸಿದ್ದಾರೆ.