ಸೇಂಟ್ ಜಾನ್ಸ್: ಭಾರತ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಅಪಹರಣ ಅಂತಾರಾಷ್ಟ್ರೀಯ ಅಪರಾಧವಾಗಿದೆ. ಇದು ಆಂಟಿಗುವಾ ಮತ್ತು ಬಾರ್ಬುಡಾಗೆ "ಅವಮಾನ" ತಂದಿದೆ ಎಂದು ಆಂಟಿಗುವಾನ್ ಸಂಸತ್ತಿನ ವಿರೋಧ ಪಕ್ಷಗಳಲ್ಲಿ ಒಂದಾದ ಯುನೈಟೆಡ್ ಪ್ರೋಗ್ರೆಸ್ಸಿವ್ ಪಾರ್ಟಿ (ಯುಪಿಪಿ) ನಾಯಕ ಹೆರಾಲ್ಡ್ ಲೊವೆಲ್ ಹೇಳಿದ್ದಾರೆ.
ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲೊವೆಲ್, ಆಂಟಿಗುವಾ ಸರ್ಕಾರ ಚೋಕ್ಸಿಯ ಅಪಹರಣಕ್ಕೆ ಸಹಕಾರ ನೀಡಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ವಿರೋಧ ಪಕ್ಷ ವಂಚಕ ಚೋಕ್ಸಿಗೆ ನೆರವು ನೀಡುತ್ತಿದ್ದೆ ಎಂದು ಈ ಹಿಂದೆ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಆರೋಪ ಮಾಡಿದ್ದರು.
ಮೇ 23 ರಂದು ಆಂಟಿಗುವಾದಿಂದ ನಾಪತ್ತೆಯಾಗಿದ್ದ ಚೋಕ್ಸಿ, ಡೊಮಿನಿಕಾದಲ್ಲಿ ಸಿಕ್ಕಿಬಿದಿದ್ದಾನೆ. ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದ್ದ ಕಾರಣ ಚೋಕ್ಸಿ ಆಂಟಿಗುವಾದಿಂದ - ಬಾರ್ಬುಡಾದಿಂದ ಓಡಿಹೋಗುವಾಗ ಪೊಲೀಸರು ಬಂಧಿಸಿದ್ದರು. ಈತ ಮೇಲೆ ಡೊಮಿನಿಕಾಗೆ ಅಕ್ರಮ ಪ್ರವೇಶ ಆರೋಪ ಹೊರಿಸಲಾಗಿದೆ.
ಜಾಮೀನು ನಿರಾಕರಣೆ: ಅಕ್ರಮ ಪ್ರವೇಶ ಪ್ರಕರಣದಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರ ಡೊಮಿನಿಕಾ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಚೋಕ್ಸಿಯನ್ನು ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ವಿಚಾರಣೆಯನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ಡೊಮಿನಿಕಾ ಕೋರ್ಟ್ ನ್ಯಾಯಾಧೀಶ ಬರ್ನಿ ಸ್ಟೀಫನ್ಸನ್ ಅವರು ಉದ್ಯಮಿ ಪರವಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ಬಗ್ಗೆ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಆದೇಶ ಹೊರಡಿಸಿದ್ದರು.
ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಹೈಕೋರ್ಟ್, ಚೋಕ್ಸಿ ದೇಶದಿಂದ ಪಲಾಯನ ಮಾಡುವ ಅಪಾಯವಿದೆ. ಈತ ಡೊಮಿನಿಕಾದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಅವರು ಡೊಮಿನಿಕಾ ತೊರೆಯುವುದನ್ನು ತಡೆಯಲು ನ್ಯಾಯಾಲಯ ಯಾವುದೇ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಕೆಳ ಹಂತದ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಚೋಕ್ಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಕಾನೂನು ಕ್ರಮಗಳನ್ನು ಮುಂದುವರಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
2018 ರಿಂದ ಕೆರಿಬಿಯನ್ ದ್ವೀಪರಾಷ್ಟ್ರ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದು, ಚೋಕ್ಸಿ ಅಲ್ಲಿಯೇ ನೆಲೆಸಿದ್ದ. ಆಂಟಿಗುವಾದಿಂದ ಡೊಮಿನಿಕಾ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಹಿನ್ನೆಲೆ, ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Mehul Choksi ಒಡೆತನದ ಸಂಸ್ಥೆಗಳಿಂದ ಪಿಎನ್ಬಿಗೆ 6 ಸಾವಿರ ಕೋಟಿ ರೂ. ವಂಚನೆ- ಸಿಬಿಐ