ವಾಷಿಂಗ್ಟನ್: ಅಮೆರಿಕ ಹಾಗೂ ಚೀನಾ ನಡುವಣ ಸಂಬಂಧ ಹದಗೆಟ್ಟಿದ್ದು, ಇದೀಗ ಡ್ರ್ಯಾಗನ್ ರಾಷ್ಟ್ರದ ಮೇಲೆ ದೊಡ್ಡಣ್ಣ ಬೇಹುಗಾರಿಕೆ ಆರೋಪ ಹೊರಿಸಿದೆ.
'ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ' (ಪಿಆರ್‌ಸಿ) ಅಮೆರಿಕದ ಸರ್ಕಾರಿ ಅಧಿಕಾರಿಗಳ ಹಾಗೂ ಅಮೆರಿಕನ್ ಪ್ರಜೆಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಬೇಹುಗಾರಿಕೆ ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಚೀನಾದ ಬೇಹುಗಾರಿಕೆ ಕಾರ್ಯಾಚರಣೆಯ ವ್ಯಾಪ್ತಿ ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಯುಎಸ್ ರಾಜ್ಯ ಇಲಾಖೆ ವಕ್ತಾರರು ಆರೋಪಿಸಿದ್ದಾರೆ.
ಪಿಆರ್‌ಸಿ ಅಧಿಕಾರಿಗಳು ನಮ್ಮ ದೇಶೀಯ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಬೌದ್ಧಿಕ ಆಸ್ತಿಯನ್ನು ಕದ್ದಿದ್ದಾರೆ. ಚೀನಾದಲ್ಲಿ ವಾಸಿಸುತ್ತಿರುವ ಚೀನೀ- ಅಮೆರಿಕನ್ನರ ಕುಟುಂಬಗಳಿಗೆ ಬೆದರಿಕೆ ಹಾಕಿದ್ದಾರೆ. ನಮ್ಮ ವ್ಯಾಪಾರ - ವಹಿವಾಟುಗಳಿಗೆ ಹಾನಿಯುಂಟು ಮಾಡಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕ್ರಿಸ್ಟೋಫರ್ ವ್ರೇ ಹಾಗೂ ಅಟಾರ್ನಿ ಜನರಲ್ ವಿಲಿಯಮ್ ಬಾರ್ ಸಾರ್ವಜನಿಕೆ ಹೇಳಿಕೆಗಳನ್ನು ಸಹ ನೀಡಿದ್ದಾರೆ.