ETV Bharat / international

'ಜನರು ಬಾಹ್ಯಾಕಾಶದಲ್ಲಿ ಜನಿಸುವ, ಭೂಮಿಗೆ ಆಗಾಗ ಭೇಟಿ ನೀಡುವ ದಿನ ಬರುತ್ತೆ' - ಅಮೆಜಾನ್ ಸಂಸ್ಥಾಪಕ

author img

By

Published : Nov 14, 2021, 4:41 PM IST

ಮುಂಬರುವ ಶತಮಾನಗಳಲ್ಲಿ ಜನರು ಬಾಹ್ಯಾಕಾಶದಲ್ಲಿ ಜನಿಸುತ್ತಾರೆ. ಬಾಹ್ಯಾಕಾಶವು ಭೂಮಿಯ ಗುರುತ್ವಾಕರ್ಷಣೆ ಮತ್ತು ನದಿಗಳು, ಕಾಡುಗಳು ಮತ್ತು ವನ್ಯಜೀವಿಗಳೊಂದಿಗೆ ಪರಿಸರವನ್ನು ಮರುಸೃಷ್ಟಿಸಲಿದೆ ಎಂದು ಜೆಫ್ ಬೆಜೋಸ್(Jeff Bezos) ಹೇಳಿದ್ದಾರೆ.

ಜೆಫ್ ಬೆಜೋಸ್
ಜೆಫ್ ಬೆಜೋಸ್

ವಾಷಿಂಗ್ಟನ್​ (ಅಮೆರಿಕ): ಮುಂದೊಂದು ದಿನ ಬರುತ್ತೆ, ಆಗ ಜನರು ಬಾಹ್ಯಾಕಾಶದಲ್ಲಿ (Space) ಜನಿಸುತ್ತಾರೆ. ಬಾಹ್ಯಾಕಾಶವೇ ಅವರ ವಾಸಸ್ಥಾನವಾಗಿರತ್ತೆ. ರಜೆಯ ಮೇಲೆ ಭೂಮಿಗೆ ಆಗಾಗ ಭೇಟಿ ನೀಡುತ್ತಾರೆ ಎಂದು 'ಬ್ಲೂ ಒರಿಜಿನ್'​ (Blue Origin) ಏರೋಸ್ಪೇಸ್ ಕಂಪನಿ ಹಾಗೂ 'ಅಮೆಜಾನ್' (Amazon) ಇ-ಕಾಮರ್ಸ್ ಕಂಪನಿಯ ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಭವಿಷ್ಯ ನುಡಿದಿದ್ದಾರೆ.

ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂನ ಮುಖ್ಯ ಸಂಪಾದಕ ಆ್ಯಡಿ ಇಗ್ನೇಷಿಯಸ್ ಅವರು ಆಯೋಜಿಸಿದ್ದ 2021-ಇಗ್ನೇಷಿಯಸ್ ಫೋರಮ್​ನಲ್ಲಿ (2021 Ignatius Forum) ಮಾತನಾಡಿದ ಜೆಫ್ ಬೆಜೋಸ್, ಮುಂಬರುವ ಶತಮಾನಗಳಲ್ಲಿ ಜನರು ಬಾಹ್ಯಾಕಾಶದಲ್ಲಿ ಜನಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 11 ನಿಮಿಷಗಳ ಕಾಲ ರೋಚಕ ಅನುಭವ.. ಕನಸಿನಯಾನ ಮುಗಿಸಿ ಮರಳಿದ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಬೆಜೋಸ್‌..

ಬಾಹ್ಯಾಕಾಶವು ಮಿಲಿಯನ್​ಗಟ್ಟಲೆ ಜನರಿಗೆ ನೆಲೆ ನೀಡಲಿದೆ. ಭೂಮಿಯ ಗುರುತ್ವಾಕರ್ಷಣೆ ಮತ್ತು ನದಿಗಳು, ಕಾಡುಗಳು ಮತ್ತು ವನ್ಯಜೀವಿಗಳೊಂದಿಗೆ ಪರಿಸರವನ್ನು ಮರುಸೃಷ್ಟಿಸಲಿದೆ. ಜನರಿಗೆ ಬಾಹ್ಯಾಕಾಶವೇ ಮೊದಲ ಮನೆಯಾಗಲಿದೆ. ಆಗ ಭೂಮಿ ನಿಮಗೆ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್ (Yellowstone National Park) ಆಗಬಹುದು. ರಜಾ ದಿನಗಳಲ್ಲಿ ನೀವು ಭೂಮಿಗೆ ಭೇಟಿ ನೀಡುವಿರಿ ಎಂದು ಹೇಳಿಕೆ ನೀಡಿದ್ದಾರೆ.

ನೀಲ್ ಆರ್ಮ್‌ಸ್ಟ್ರಾಂಗ್ ಅವರು ಚಂದ್ರನ ಮೇಲೆ ಕಾಲಿಟ್ಟಾಗ ನನಗೆ ಕೇವಲ 5 ವರ್ಷ. ಅಂದೇ ನನ್ನಲ್ಲಿ ಬಾಹ್ಯಾಕಾಶ ಪರಿಶೋಧನೆಯ ಬಗ್ಗೆ ಅವರ ಉತ್ಸಾಹ ಪ್ರಾರಂಭವಾಯಿತು. ಬಾಹ್ಯಾಕಾಶಕ್ಕೆ ಹೋಗುವ ರಸ್ತೆಯನ್ನು ನಿರ್ಮಿಸಲು ಬ್ಲೂ ಒರಿಜಿನ್‌ನಂತಹ ಕಂಪನಿಯನ್ನು ಸ್ಥಾಪಿಸುವ ಕನಸು ಕಂಡಿದ್ದೆ ಎಂದು ಜೆಫ್ ಬೆಜೋಸ್ ಹೇಳಿದರು.

ಇದನ್ನೂ ಓದಿ: ಜೆಫ್‌ ಬೆಜೋಸ್ ಹಿಂದಿಕ್ಕಿ ವಿಶ್ವದ ನಂಬರ್‌ ಒನ್‌ ಶ್ರೀಮಂತ ವ್ಯಕ್ತಿ ಎನಿಸಿರುವ ಅರ್ನಾಲ್ಟ್ ಯಶಸ್ಸಿನ ಗುಟ್ಟೇನು!?

ಕಳೆದ ಜುಲೈನಲ್ಲಿ ವರ್ಜಿನ್ ಗ್ಯಾಲಕ್ಸಿಯ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸ ಕೈಗೊಂಡು ಮರಳಿದ ಒಂಬತ್ತು ದಿನಗಳ ನಂತರ ಜೆಫ್ ಬೆಜೋಸ್‌ ಅವರು ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿ ಬಂದಿದ್ದರು. ಸ್ವಂತ ರಾಕೆಟ್​ನಲ್ಲಿ ಬಾಹ್ಯಾಕಾಶಕ್ಕೆ ಹಾರಿದ್ದ ವಿಶ್ವದ ಎರಡನೇ ವ್ಯಕ್ತಿ ಇವರಾಗಿದ್ದಾರೆ. ಇಲ್ಲಿಯವರೆಗೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೆಫ್ ಬೆಜೋಸ್​ರನ್ನು ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಡ್ ಹಿಂದಿಕ್ಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.