ETV Bharat / international

ಬಸ್​​-ಟ್ರಕ್​ ನಡುವೆ ಭೀಕರ ಅಪಘಾತ... 16 ಸಾವು, 22 ಮಂದಿಗೆ ಗಾಯ - ಮೆಕ್ಸಿಕೋ ಸಿಟಿ

ಭೀಕರ ರಸ್ತೆ ಅಪಘಾತದಲ್ಲಿ ಬಸ್​​-ಟ್ರಕ್​ ಮುಖಾಮುಖಿಯಾಗಿದ್ದು, ಸ್ಥಳದಲ್ಲೇ 16 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

BUS TRUCK COLLISION
BUS TRUCK COLLISION
author img

By

Published : Sep 3, 2021, 3:31 AM IST

ಮೆಕ್ಸಿಕೋ ಸಿಟಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ಯಾಸೆಂಜರ್​ ಹೊತ್ತೊಯ್ಯುತ್ತಿದ್ದ ಬಸ್​ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ 16 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಮೆಕ್ಸಿಕೋದಲ್ಲಿ ನಡೆದಿದೆ.

ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದು, ಇದರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿರಿ: Eng vs Ind 4ನೇ ಟೆಸ್ಟ್‌: 191ಕ್ಕೆ ಟೀಂ ಇಂಡಿಯಾ ಆಲೌಟ್‌; ಆರಂಭದಲ್ಲೇ ಆಂಗ್ಲರಿಗೆ ಆಘಾತ ನೀಡಿದ ಕೊಹ್ಲಿ ಬೌಲರ್ಸ್​​

ಯುಎಸ್​​-ಮೆಕ್ಸಿಕೋ ಗಡಿಯ ಸೊನೊಯ್ತಾ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪ್ರಾಸಿಕ್ಯೂಟರ್​​ ಕಚೇರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಅಪಘಾತವಾಗಿರುವ ರಭಸಕ್ಕೆ ಬಸ್​ನ ಮುಂದಿನ ಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಕೆಲವೊಂದು ಮೃತದೇಹಗಳ ಗುರುತು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.