ವಾಷಿಂಗ್ಟನ್ (ಅಮೆರಿಕ): ಯುರೋಪಿಯನ್ ಯೂನಿಯನ್ ವಿದೇಶಾಂಗ ವ್ಯವಹಾರಗಳ ಮಂಡಳಿಯೊಂದಿಗಿನ ವರ್ಚುಯಲ್ ಸಭೆಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು, ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಷ್ಯಾದ ವಿರುದ್ಧ ಮತ್ತು ಯುರೋಪಿಯನ್ ಯೂನಿಯನ್ ಪಾಲುದಾರರೊಂದಿಗೆ ಯುನೈಟೆಡ್ ಸ್ಟೇಟ್ಸ್ ಸಮನ್ವಯವನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಇಯು ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಅವರ ಆಹ್ವಾನದ ಮೇರೆಗೆ ಇಂದಿನ ಯುರೋಪಿಯನ್ ಯೂನಿಯನ್ ವಿದೇಶಾಂಗ ವ್ಯವಹಾರಗಳ ಸಭೆಯಲ್ಲಿ ಭಾಗವಹಿಸಿದರು. ಯುನೈಟೆಡ್ ಸ್ಟೇಟ್ಸ್ ರಷ್ಯಾದ ಆಕ್ರಮಣ ತಡೆಯಲು ಮುಂದಿನ ಕ್ರಮಗಳಿಗೆ ಒತ್ತು ನೀಡಲಾಗುವುದು, ಯುರೋಪಿಯನ್ ಯೂನಿಯನ್ ಪಾಲುದಾರರೊಂದಿಗೆ ಮುಂದುವರಿಯಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: 'ಸ್ಟುಪಿಡ್ ಸನ್ ಆಫ್ ಎ..' ಎಂದು ಪತ್ರಕರ್ತನಿಗೆ ನಿಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಉಕ್ರೇನ್ ಮತ್ತು ರಷ್ಯಾ ನೂರಾರು ವರ್ಷಗಳಿಂದ ಸಾಂಸ್ಕೃತಿಕ, ಭಾಷಾ ಮತ್ತು ಕೌಟುಂಬಿಕ ಸಂಬಂಧಗಳನ್ನು ಹಂಚಿಕೊಂಡು ಬಂದಿವೆ. ರಷ್ಯಾದ ಬಳಿಕ, ಉಕ್ರೇನ್ ಎರಡನೇ ಅತ್ಯಂತ ಶಕ್ತಿಶಾಲಿ ಸೋವಿಯತ್ ಗಣರಾಜ್ಯವಾಗಿತ್ತು. ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಬೇರ್ಪಟ್ಟಾಗಿನಿಂದ ಉಕ್ರೇನ್ನಲ್ಲಿ ತನ್ನ ಅಧಿಕಾರ ಸ್ಥಾಪಿಸಲು ರಷ್ಯಾ ಪ್ರಯತ್ನಿಸುತ್ತಲೇ ಬಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ