ETV Bharat / international

ಆಗಸ್ಟ್‌ 31ರೊಳಗೆ ಅಫ್ಘಾನ್‌ನಲ್ಲಿ ರಕ್ಷಣಾ ಕಾರ್ಯ ಮುಕ್ತಾಯ; ಅಗತ್ಯಬಿದ್ದರೆ ಮಾತ್ರ ಅವಧಿ ವಿಸ್ತರಣೆ: ಬೈಡನ್ - ತಾಲಿಬಾನ್‌

ಆಗಸ್ಟ್‌ 31ರೊಳಗೆ ಅಫ್ಘಾನಿಸ್ತಾನದಲ್ಲಿರುವ ಅಮೆರಿಕರನ್ನರನ್ನು ಸ್ವದೇಶಕ್ಕೆ ಸ್ಥಳಾಂತರಿಸಿ ರಕ್ಷಣಾ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲು ಅಧ್ಯಕ್ಷ ಜೋ ಬೈಡನ್‌ ನಿರ್ಧರಿಸಿದ್ದು, ಅಗತ್ಯಬಿದ್ದರೆ ಮಾತ್ರ ಈ ಅವಧಿಯನ್ನು ವಿಸ್ತರಿಸುವುದಾಗಿ ಹೇಳಿದ್ದಾರೆ.

Biden says still hoping for Afghan airlift to end by Aug 31 deadline
ಆಗಸ್ಟ್‌ 31ರೊಳಗೆ ಆಫ್ಘಾನ್‌ನಲ್ಲಿ ರಕ್ಷಣಾ ಕಾರ್ಯ ಮುಕ್ತಾಯ; ಅಗತ್ಯ ಬಿದ್ದರೆ ಮಾತ್ರ ಅವಧಿ ವಿಸ್ತರಣೆ: ಜೋ ಬೈಡನ್
author img

By

Published : Aug 23, 2021, 7:15 AM IST

Updated : Aug 23, 2021, 9:09 AM IST

ವಾಷಿಂಗ್ಟನ್‌: ಅಫ್ಘಾನಿಸ್ತಾನದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯನ್ನು ಆಗಸ್ಟ್‌ 31ಕ್ಕೆ ಮುಕ್ತಾಯಗೊಳಿಸಲು ಯೋಚಿಸುತ್ತಿದ್ದೇವೆ. ಅಗತ್ಯಬಿದ್ದರೆ ಈ ಗಡುವನ್ನು ವಿಸ್ತರಿಸುವುದಾಗಿ ಜೋ ಬೈಡನ್‌ ಹೇಳಿದರು.

ಶ್ವೇತಭವನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಈ ಅವಧಿಯನ್ನು ನಾವು ವಿಸ್ತರಿಸಿಕೊಳ್ಳಬೇಕಿಲ್ಲ. ಅಫ್ಘಾನ್‌ನಲ್ಲಿರುವ ಅಸ್ಥಿರ ಪರಿಸ್ಥಿತಿ ಹಾಗೂ ಸ್ಥಳಾಂತರ ಮಾಡಬೇಕಿರುವ ಜನರ ಸಂಖ್ಯೆ ಏರುತ್ತಲೇ ಇರುವುದರಿಂದ ಹೆಚ್ಚಿನ ತೊಂದರೆ ಆಗುತ್ತಿದೆ ಎಂದರು.

ನಾವು ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನಿಗಳು ಸಂಭವನೀಯ ದಾಳಿ ನಡೆಸುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಸುಮಾರು 28,000 ಜನರನ್ನು ಅಫ್ಘಾನ್‌ನಿಂದ ಹೊರ ಕಳುಹಿಸಲಾಗಿದೆ ಎಂದು ಬೈಡನ್‌ ತಿಳಿಸಿದರು.

ಇದನ್ನೂ ಓದಿ: ಜನರು ದೇಶ ತೊರೆಯುವುದನ್ನು ನಿಲ್ಲಿಸಲು ಪ್ಲ್ಯಾನ್ : ಶೀಘ್ರವೇ ತಾಲಿಬಾನ್ ಸರ್ಕಾರ ರಚಿಸುವುದಾಗಿ ಘೋಷಣೆ

ಉಗ್ರರಿಂದ ತಪ್ಪಿಸಿಕೊಳ್ಳಲು ಜನರು ಹತಾಶೆಯಿಂದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ. ಏರ್ಪೋರ್ಟ್ ತುಂಬಿ ತುಳುಕುತ್ತಿರುವ ದೃಶ್ಯಗಳನ್ನು ನೋಡಿದರೆ ಬೇಸರವಾಗುತ್ತದೆ. ಆದರೆ ಎಲ್ಲರನ್ನೂ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಗುರಿಯನ್ನು ಆದಷ್ಟು ಬೇಗ ಮುಗಿಸಲು ಅಮೆರಿಕದ ಅಧಿಕಾರಿಗಳೇಕೆ ಉತ್ಸುಕರಾಗಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಐಸಿಸ್‌ ಉಗ್ರರಿಂದ ನಿರಂತರ ಬೆದರಿಕೆ ಇದೆ. ಭಯೋತ್ಪಾದಕರು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ಹೀಗಾಗಿ ಮುಂದಿನ ರಕ್ಷಣಾ ಕಾರ್ಯಾಚರಣೆ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

Last Updated : Aug 23, 2021, 9:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.