ವಾಷಿಂಗ್ಟನ್: ಜೂನ್ 16ರಂದು ಜಿನೀವಾದಲ್ಲಿ ನಿಗದಿಯಾಗಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯು ಬಹಳ ಮುಖ್ಯ ಮತ್ತು ಅವಶ್ಯವಾಗಿದೆ ಎಂದು ಬೈಡನ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅಭಿಪ್ರಾಯಪಟ್ಟಿದ್ದಾರೆ.
ಕೆಲ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಎರಡೂ ದೇಶಗಳ ಮುಖ್ಯಸ್ಥರು ಭೇಟಿಯಾಗುತ್ತಿದ್ದಾರೆ. ನಾವು ರಷ್ಯಾದ ಅಧ್ಯಕ್ಷರೊಂದಿಗಿನ ಭೇಟಿಯನ್ನು ಬಹುಮಾನವೆಂದು ಪರಿಗಣಿಸುವುದಿಲ್ಲ. ಅಮೆರಿಕದ ಹಿತಾಸಕ್ತಿಗಳನ್ನು ಮತ್ತು ಅಮೆರಿಕದ ಮೌಲ್ಯಗಳನ್ನು ರಕ್ಷಿಸುವ ಪ್ರಮುಖ ಭಾಗ ಎಂದು ನಾವು ಪರಿಗಣಿಸುತ್ತೇವೆ ಎಂದಿದ್ದಾರೆ.
ಜೂನ್ 15ರಂದು ಬೈಡನ್ ಜಿ7 ರಾಷ್ಟ್ರದ ಮುಖ್ಯಸ್ಥರು, ನ್ಯಾಟೋ ಮತ್ತು ಇಯು ಸದಸ್ಯರ ಸಭೆ ನಡೆಸಿದ ಬಳಿಕ ಪುಟಿನ್ ಅವರೊಂದಿಗೆ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮುಂದಿನ ವಾರದಲ್ಲಿ ಅಧ್ಯಕ್ಷ ಬೈಡನ್ ವಾಷಿಂಗ್ಟನ್ಗೆ ಮರಳುತ್ತಿದ್ದು, ನಮ್ಮ ದೇಶ ಎದುರಿಸುತ್ತಿರುವ ಬೆದರಿಕೆ, ಸವಾಲುಗಳ ನಿರ್ವಹಿಸಲು ಭೌತಿಕ ಬಲ ಹೊಂದಲಿದ್ದೇವೆ ಎಂಬ ನಂಬಿಕೆ ಇದೆ ಎಂದು ಸುಲ್ಲಿವಾನ್ ಹೇಳಿದ್ದಾರೆ.
ಅಧ್ಯಕ್ಷ ಬೈಡನ್, ಪುಟಿನ್ ಅವರ ಎದುರಿಗೆ ಕುಳಿತು ನೇರ ಮಾತುಕತೆ ನಡೆಸುತ್ತಿರುವುದು ದೊಡ್ಡಣ್ಣನ ದೃಷ್ಟಿಯಿಂದ ಮುಖ್ಯವಾಗಿದೆ. ಅಲ್ಲದೇ ರಷ್ಯಾದ ಉದ್ದೇಶ ಮತ್ತು ಯೋಜನೆಗಳ ಅರ್ಥಮಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗ ಎಂದಿದ್ದಾರೆ.