ವಾಷಿಂಗ್ಟನ್: ಅಮೆರಿಕಾದ ನಾಗರಿಕರಿಗೆ ಧೈರ್ಯ ತುಂಬುವ ಪ್ರಯತ್ನದಲ್ಲಿ ಜೋ ಬಿಡೆನ್ ಎರಡನೇ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ತಮ್ಮ ಜಾಕೆಟ್ ಬಿಚ್ಚಿ “ರೆಡಿ, ಸೆಟ್, ಗೋ” ಎಂದು ಹೇಳಿದ ಬಿಡೆನ್, ದಾದಿಯ ಮೂಲಕ ಲಸಿಕೆಯನ್ನು ಪಡೆದಿದ್ದಾರೆ. ಇನ್ನು ಡಿಸೆಂಬರ್ 21 ರಂದು ಬಿಡೆನ್ ಮೊದಲ ಲಸಿಕೆ ಪಡೆದುಕೊಂಡಿದ್ದರು. ಯುನೈಟೆಡ್ ಸ್ಟೇಟ್ಸ್ನಲ್ಲಿ ಈವರೆಗೆ 375,000 ಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಲಸಿಕೆ ಪಡೆದ ನಂತರ ಮಾತನಾಡಿದ ಬಿಡೆನ್, ಕೊರೊನಾವನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡುತ್ತಾರೆ ಎಂಬ ವಿಶ್ವಾಸ ನಮ್ಮ ವೈದ್ಯಕೀಯ ತಂಡದ ಮೇಲಿದೆ. ಜನವರಿ 20 ರಂದು ನಾನು ಅಧಿಕಾರ ವಹಿಸಿಕೊಂಡ ನಂತರ ಈ ಗುರಿಯನ್ನು ತಲುಪಲಿದ್ದೇವೆ ಎಂದು ತಿಳಿಸಿದ್ದಾರೆ.