ETV Bharat / international

ಬ್ರೆಜಿಲ್​ನಲ್ಲಿ ಭೀಕರ ರಸ್ತೆ ಅಪಘಾತ; 41 ಮಂದಿ ದುರ್ಮರಣ - bus and truck collide in Brazil news

ಆಗ್ನೇಯ ಬ್ರೆಜಿಲ್‌ನ ಸಾವೊ ಪಾಲೊ ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 41 ಮಂದಿ ಸಾವನ್ನಪ್ಪಿದ್ದಾರೆ.

accident
ಅಪಘಾತ
author img

By

Published : Nov 26, 2020, 12:24 PM IST

ಬ್ರೆಜಿಲ್‌: ಬಸ್ ಮತ್ತು ಟ್ರಕ್ ಮಧ್ಯೆ ಡಿಕ್ಕಿ ಹೊಡೆದು ಸುಮಾರು 41 ಮಂದಿ ಸಾವನ್ನಪ್ಪಿರುವ ಘಟನೆ ಸಾವೊ ಪೌಲೊ ನಗರದಲ್ಲಿ ನಡೆದಿದೆ.

ಆಗ್ನೇಯ ಬ್ರೆಜಿಲ್‌ನ ಸಾವೊ ಪಾಲೊ ನಗರದ ಪಶ್ಚಿಮಕ್ಕೆ ಸರಿಸುಮಾರು 350 ಕಿ.ಮೀ (217 ಮೈಲಿ) ದೂರದಲ್ಲಿರುವ ಟಾಗುಯಿ ನಗರದ ಬಳಿ ಬಸ್​ವೊಂದಕ್ಕೆ​ ಟ್ರಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​ನಲ್ಲಿದ್ದ ಸುಮಾರು 41 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ತುರ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳ ರಕ್ಷಣಾ ಕಾರ್ಯ ನಡೆಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ರಾಜ್ಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿಯೇ 37 ಜನರು ಸಾವನ್ನಪ್ಪಿದ್ದು, ತೀವ್ರತರವಾದ ಗಾಯದಿಂದ ನಾಲ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.