ETV Bharat / international

ರಹಸ್ಯವಾಗಿ ಎರಡು ಮಕ್ಕಳ ತಂದೆಯಾದ ವಿಕಿಲೀಕ್ಸ್​ ಸಂಸ್ಥಾಪಕ ಅಸಾಂಜ್ - ಸ್ಟೆಲ್ಲಾ ಮಾರಿಸ್

ವರ್ಷದ ಹಿಂದೆ ಇಕ್ವೆಡಾರ್​ ರಾಯಭಾರ ಕಚೇರಿಯಲ್ಲಿ ಅಡಗಿದ್ದಾಗ ಭೇಟಿಯಾಗುತ್ತಿದ್ದ ವಕೀಲೆ ಸ್ಟೆಲ್ಲಾ ಮಾರಿಸ್​ರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಅಸಾಂಜ್ ಎರಡು ಮಕ್ಕಳ ತಂದೆಯಾಗಿದ್ದಾರೆ ಎಂದು ವಿಕಿಲೀಕ್ಸ್​ ವೆಬ್​​ಸೈಟ್​ ಪ್ರಕಟಿಸಿದೆ. ಅಲ್ಲದೆ ವಕೀಲೆ ಸ್ಟೆಲ್ಲಾ ಸ್ವತಃ ಈ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Assange secretly fathered 2 children
Assange secretly fathered 2 children
author img

By

Published : Apr 13, 2020, 2:22 PM IST

ಲಂಡನ್: ವಿಕಿಲೀಕ್ಸ್​ ಸಂಸ್ಥಾಪಕ ಜೂಲಿಯೆನ್ ಅಸಾಂಜ್​ ಎರಡು ಮಕ್ಕಳ ತಂದೆಯಾಗಿದ್ದು, ಆ ಮಕ್ಕಳ ತಾಯಿ ತಾನೇ ಆಗಿದ್ದೇನೆ ಎಂಬ ಅಚ್ಚರಿಯ ವಿಷಯ ಹೊರಗೆಡವಿದ್ದಾರೆ ಅಸಾಂಜ್ ವಕೀಲೆ ಸ್ಟೆಲ್ಲಾ ಮಾರಿಸ್. ಅಮೆರಿಕದ ರಹಸ್ಯ ಗುಪ್ತಚರ ದಾಖಲೆಗಳನ್ನು ಸೋರಿಕೆ ಮಾಡಿದ ಹಾಗೂ ಅತ್ಯಾಚಾರದ ಆರೋಪಗಳನ್ನು ಅಸಾಂಜ್ ಎದುರಿಸುತ್ತಿದ್ದು, ಬ್ರಿಟನ್​ನಿಂದ ಅಮೆರಿಕೆಗೆ ಹಸ್ತಾಂತರವಾಗುವ ಭೀತಿಯಲ್ಲಿರುವ ಅವರು ಸದ್ಯ ಲಂಡನ್​ ಜೈಲಿನಲ್ಲಿ ಬಂದಿಯಾಗಿದ್ದಾರೆ.

ವರ್ಷದ ಹಿಂದೆ ಇಕ್ವೆಡಾರ್​ ರಾಯಭಾರ ಕಚೇರಿಯಲ್ಲಿ ಅಡಗಿದ್ದಾಗ ಭೇಟಿಯಾಗುತ್ತಿದ್ದ ವಕೀಲೆ ಸ್ಟೆಲ್ಲಾ ಮಾರಿಸ್​ರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಅಸಾಂಜ್ ಎರಡು ಮಕ್ಕಳ ತಂದೆಯಾಗಿದ್ದಾರೆ ಎಂದು ವಿಕಿಲೀಕ್ಸ್​ ವೆಬ್​​ಸೈಟ್​ ಪ್ರಕಟಿಸಿದೆ. ಅಲ್ಲದೆ ವಕೀಲೆ ಸ್ಟೆಲ್ಲಾ ಸ್ವತಃ ಈ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಸದ್ಯ ಲಂಡನ್ ಜೈಲಿಗೂ ಕೊರೊನಾ ವೈರಸ್​ ಸೋಂಕು ಹರಡಿದೆ. ಈ ಮಧ್ಯೆ ಅಸಾಂಜ್​ ಆರೋಗ್ಯ ಸ್ಥಿತಿ ಹದಗೆಟ್ಟು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ 48 ವರ್ಷದ ಅಸಾಂಜ್​ ಅವರನ್ನು ಬಂಧನದಿಂದ ಬಿಡುಗೊಡೆಗೊಳಿಸಬೇಕೆಂಬ ಉದ್ದೇಶದಿಂದ ಇಬ್ಬರ ಮಧ್ಯದ ಸಂಬಂಧವನ್ನು ಬಹಿರಂಗಗೊಳಿಸುತ್ತಿರುವುದಾಗಿ ಸ್ಟೆಲ್ಲಾ ಮಾರಿಸ್​ ಹೇಳಿಕೊಂಡಿದ್ದಾರೆ.

ಕಳೆದ 25 ರಂದು ಲಂಡನ್​ ವೆಸ್ಟ್​ಮಿನಿಸ್ಟರ್​ ನ್ಯಾಯಾಲಯ ಅಸಾಂಜ್​ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಸಾಂಜ್​ ಬಂಧಿತರಾಗಿರುವ ಬೆಲ್​ಮಾರ್ಷ್​ ಜೈಲಿನಲ್ಲಿ ಕೈದಿಯೊಬ್ಬ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ. ಹೀಗಾಗಿ ಅಸಾಂಜ್​ ವಕೀಲರು ಮತ್ತೊಮ್ಮೆ ಜಾಮೀನು ಅರ್ಜಿಯನ್ನು ಸಲ್ಲಿಸಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕೆಯ ಯುದ್ಧಕ್ಕೆ ಸಂಬಂಧಿಸಿದ ಲಕ್ಷಾಂತರ ಪುಟಗಳಷ್ಟು ರಹಸ್ಯ ಮಾಹಿತಿಯನ್ನು ವಿಕಿಲೀಕ್ಸ್​ ಮೂಲಕ ಅಸಾಂಜ್​ ಬಹಿರಂಗಗೊಳಿಸಿದ್ದರು. ಇದರಿಂದ ಕ್ರುದ್ಧವಾಗಿರುವ ಅಮೆರಿಕ ಶತಾಯಗತಾಯ ಅಸಾಂಜ್​ ಅವರನ್ನು ದೇಶಕ್ಕೆ ಕರೆತಂದು ಶಿಕ್ಷೆಗೆ ಗುರಿಪಡಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.