ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ವಿದೇಶಿ ಕಾರ್ಮಿಕರಿಗೆ ಹೊಸ ವೀಸಾಗಳನ್ನು ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಮೊಕದ್ದಮೆಗೆ ಹೂಡಲಾಗಿದೆ.
ಈ ಮೊಕದ್ದಮೆಗೆ ಆಪಲ್, ಫೇಸ್‌ಬುಕ್, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಟ್ವಿಟರ್ ಸೇರಿದಂತೆ ತಂತ್ರಜ್ಞಾನ ದೈತ್ಯ ಕಂಪನಿಗಳು ಬೆಂಬಲ ನೀಡಿವೆ.
ಹೊಸ ವೀಸಾ ನಿರ್ಬಂಧಗಳು ಕೋವಿಡ್ -19 ಸಂದರ್ಭದಲ್ಲಿ ಯುಎಸ್ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಕಂಪನಿಗಳು ತಿಳಿಸಿವೆ ಎಂದು ದಿ ವರ್ಜ್ ವರದಿ ಮಾಡಿದೆ.
"ಅಮೆರಿಕದ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ವಲಸೆ ರಹಿತ ವೀಸಾವನ್ನು ಟ್ರಂಪ್ ಅಮಾನತುಗೊಳಿಸಿರುವುದು, ಆ ಕಾರ್ಮಿಕರಿಗೆ, ಅವರ ಉದ್ಯೋಗದಾತರಿಗೆ ಮತ್ತು ಆರ್ಥಿಕತೆಗೆ ಹಾನಿ ಮಾಡುತ್ತದೆ" ಎಂದು ಕಂಪನಿಗಳು ತಿಳಿಸಿವೆ. ಟ್ರಂಪ್ ಅವರ ಈ ಕ್ರಮದಿಂದ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಗಾಗಿದ್ದಾರೆ.
ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಕಂಪನಿಗಳು ಮಾತ್ರ ಟ್ರಂಪ್ ಅವರ ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿವೆ.