ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಮೊದಲ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಹಣದುಬ್ಬರ ಮತ್ತು ಕೊರೊನಾ ವಿರುಧ್ದ ಹೋರಾಡಲು ಕಾರ್ಯಯೋಜನೆ ರೂಪಿಸುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನೂ ಪ್ರಮುಖ ಅಂಶ ಎಂದರೆ, ರಷ್ಯಾ ದಾಳಿಗೆ ಬೆಲೆ ತೆರುವಂತೆಯೂ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಉಕ್ರೇನಿಯನ್ ರಕ್ಷಕರ ಶೌರ್ಯ ಮತ್ತು , ಜೊತೆಗೆ ಉಕ್ರೇನಿಯನ್ ಮಿಲಿಟರಿಗೆ ಬಲ ತುಂಬಲು ಮತ್ತು ನಿರ್ಬಂಧಗಳ ಮೂಲಕ ರಷ್ಯಾದ ಆರ್ಥಿಕತೆ ದುರ್ಬಲಗೊಳಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರ ಆಕ್ರಮಣವು ಸರಿಯಲ್ಲ ಎಂದೂ ಎಚ್ಚರಿಸಿದ್ದಾರೆ. ಈ ಮೂಲಕ ಯಾವುದೇ ಯುಧ್ಧಗಳನ್ನು ಕೈಗೊಳ್ಳದೇ ಈ ಬಗ್ಗೆ ಉತ್ತರ ನೀಡಲು ಬೈಡನ್ ನಿರ್ಧರಿಸಿದ್ದಾರೆ. ನಮ್ಮ ಇತಿಹಾಸದ ಉದ್ದಕ್ಕೂ ನಾವು ನೋಡಿದ್ದೇವೆ. ಸರ್ವಾಧಿಕಾರಿಗಳು ಆಕ್ರಮಣಶೀಲತೆಗೆ ಬೆಲೆ ಕೊಟ್ಟಾಗ ಅವರು ಹೆಚ್ಚು ಅವ್ಯವಸ್ಥೆಯನ್ನು ಉಂಟುಮಾಡಿದ್ದಾರೆ ಮತ್ತು ಅದಕ್ಕೆ ಬೆಲೆ ತೆತ್ತಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.
ಕೋವಿಡ್ ಬಹಳಷ್ಟು ಕಾಟ ಕೊಟ್ಟಿದೆ: ಅಮೆರಿಕ ಮತ್ತು ಜಗತ್ತಿಗೆ ಬೆದರಿಕೆಗಳು ಹೆಚ್ಚುತ್ತಲೇ ಇವೆ. ಕೋವಿಡ್ ಸಾಂಕ್ರಾಮಿಕವು ಕುಟುಂಬಗಳನ್ನು ಮತ್ತು ದೇಶದ ಆರ್ಥಿಕತೆಯನ್ನು ಹಿಮ್ಮೆಟ್ಟಿಸಿದೆ. ಇದರಿಂದ ಹೊರಬರಲು ಅಮೆರಿಕವು ಉತ್ಪಾದನಾ ಸಾಮರ್ಥ್ಯದಲ್ಲಿ ಮರುಹೂಡಿಕೆ ಮಾಡುವ ಮೂಲಕ ಹಣದುಬ್ಬರವನ್ನು ಪರಿಹರಿಸುವ ಯೋಜನೆಗಳನ್ನು ರೂಪಿಸಲು ಬೈಡನ್ ನಿರ್ಧರಿಸಿದ್ದಾರೆ, ಪೂರೈಕೆ ಮತ್ತು ಬೇಡಿಕೆಯ ಸರಪಳಿಯನ್ನು ವೇಗಗೊಳಿಸುವುದು. ಮತ್ತು ಕಾರ್ಮಿಕರ ಮೇಲಿನ ಮಕ್ಕಳ ಆರೈಕೆ ಮತ್ತು ಹಿರಿಯ ಆರೈಕೆಯ ಹೊರೆಯನ್ನು ಕಡಿಮೆ ಮಾಡುವುದು ಪ್ರಮುಖವಾಗಿದೆ ಎಂದು ಹೇಳಿದ್ದಾರೆ. ಅಮೆರಿಕದ ಉಂಟಾಗಿರುವ ಹಣದುಬ್ಬರವನ್ನು ತಡೆಯಲು ಜನರಲ್ಲಿ ವೆಚ್ಚವನ್ನು ಕಡಿಮೆ ಮಾಡುವಂತೆ ಕೋರಿದ್ದಾರೆ.
ರಷ್ಯಾದ ಮೇಲೆ ಉಕ್ರೇನಿನ ಅಧ್ಯಕ್ಷರು ಝೆಲೆನ್ ಸ್ಕೀ, ಅಮೆರಿಕವು ರಷ್ಯಾ ದಾಳಿಗೆ ಸೂಕ್ತ, ಮತ್ತು ಉಪಯುಕ್ತ ಸಂದೇಶವನ್ನು ರವಾನೆ ಮಾಡುವಂತೆ ಕೋರಿದೆ. ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಪರಿಣಾಮವಾಗಿ ಏರುತ್ತಿರುವ ಇಂಧನ ಬೆಲೆಗಳು ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಿಸುತ್ತದೆ. ಇದು ಈಗಾಗಲೇ 40 ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.
ಅಮೆರಿಕ ಜನ ನನ್ನ ಪರವಾಗಿದ್ದಾರೆ: ಬೈಡನ್ ಆಡಳಿತ ಕ್ಷಮತೆಯ ಸಮೀಕ್ಷೆ ನಡೆಸಲಾಗಿ ಶೇ. 60ಕ್ಕೂ ಅಧಿಕ ಜನರು ಬೈಡೆನ್ ಪರವಾಗಿ ಇದ್ದಾರೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಬೈಡನ್ ಅವರು ಅಮೆರಿಕದಲ್ಲಿ ಬಹುತೇಕ ಜನರಿಗೆ ಲಸಿಕೆ ನೀಡುವುದರ ಮೂಲಕ ಕೋವಿಡ್ ನಿಯಂತ್ರಿಸಲು ಸಹಕಾರಿಯಾಗಿದೆ. ಮುಖ್ಯವಾಗಿ ವೈದ್ಯಕೀಯ ವೆಚ್ಚ, ವೈದ್ಯಕೀಯ ವಸ್ತುಗಳು, ಹೆಲ್ತ್ ಇನ್ಸೂರನ್ಸ್ ವೆಚ್ಚ ಕಡಿಮೆಗೊಳಿಸಿ 14.5 ಮಿಲಿಯನ್ ಜನರಿಗೆ ಉಪಯುಕ್ತವಾಗುವಂತೆ ಮಾಡಲಾಗುವುದು ಎಂದು ಬೈಡನ್ ಇದೇ ವೇಳೆ ಭರವಸೆ ನೀಡಿದ್ದಾರೆ. ಜೊತೆಗೆ ಮತದಾನದ ಹಕ್ಕುಗಳನ್ನು, ಗನ್ ಬಳಕೆಯ ನಿಯಂತ್ರಣದ ಕುರಿತು ವಿವಿಧ ವಿಷಯದ ಕುರಿತೂ ಅಮೆರಿಕ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಪ್ರಸ್ತಾವ ಮಾಡಿದ್ದಾರೆ.
ಅಮೆರಿಕದಲ್ಲಿ ಹೆಚ್ಚಿರುವ ಹಣದುಬ್ಬರವನ್ನು ನಿಯಂತ್ರಿಸುವುದು ಬಹಳ ಮುಖ್ಯ ಸಂಗತಿ ಎಂದು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ. ರಷ್ಯಾದ ಸರ್ವಾಧಿಕಾರಿ ಧೋರಣೆಯಿಂದ ಇಡೀ ಜಗತ್ತಿಗೆ ಕಂಟಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ ಬೈಡನ್ ಅಮೆರಿಕವು ಉಕ್ರೇನ್ ಪರ ಇರುವುದಾಗಿ ಇದೇ ವೇಳೆ ಘೋಷಿಸಿದ್ದಾರೆ.
ಓದಿ :Russia-Ukraine War: ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಬೆಳವಣಿಗೆಗಳು ಇಂತಿವೆ