ETV Bharat / international

ಐಸಿಸ್​​​ನಿಂದ ಅಫ್ಘಾನಿಸ್ತಾನ ಪುನಾರಚನೆ ಸಾಧ್ಯತೆ ಇದೆ: ಮಾರ್ಕ್ ಮಿಲ್ಲೆ ಆತಂಕ - ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್

ಅಲ್ ಖೈದಾ ಅಥವಾ ಐಎಸ್​ಐಎಸ್ ಮುಂದಿನ 3 ವರ್ಷಗಳಲ್ಲಿ ಅಫ್ಘಾನಿಸ್ತಾನವನ್ನು ಪುನರ್​ ರಚಿಸುವ ಸಾಧ್ಯತೆ ಇದೆ ಎಂದು ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಮಾರ್ಕ್ ಮಿಲ್ಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಮಾರ್ಕ್ ಮಿಲ್ಲೆ
ಮಾರ್ಕ್ ಮಿಲ್ಲೆ
author img

By

Published : Sep 30, 2021, 10:27 AM IST

ವಾಷಿಂಗ್ಟನ್( ಅಮೆರಿಕ) : ಐಎಸ್​ಐಎಸ್​ ಮುಂದಿನ 6 ರಿಂದ 36 ತಿಂಗಳಲ್ಲಿ ಅಫ್ಘಾನಿಸ್ತಾನವನ್ನು ಪುನರ್​ ರಚಿಸುವ ಸಾಧ್ಯತೆ ಇದೆ ಎಂದು ಸೇನಾ ಸಿಬ್ಬಂದಿ ವಿಭಾಗದ ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಮಾರ್ಕ್ ಮಿಲ್ಲೆ ಹೇಳಿದ್ದಾರೆ.

ಬುಧವಾರ ನಡೆದ ಹೌಸ್ ಆರ್ಮ್ಡ್ ಸರ್ವಿಸಸ್ ಕಮಿಟಿ ವಿಚಾರಣೆಯಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನ್​ ದಾಳಿಯಿಂದ ಅಮೆರಿಕದ ನಾಗರಿಕರನ್ನು ರಕ್ಷಿಸುವುದು ನಮ್ಮ ಕೆಲಸ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳ ಪುನಾರಚನೆ ಸಾಧ್ಯತೆ ಇದೆ. ಅಲ್ ಖೈದಾ ಸಂಘಟನೆ 6 ರಿಂದ 36 ತಿಂಗಳ ಕಾಲಾವಧಿಯಲ್ಲಿ ದೇಶವನ್ನು ಪುನರ್​ ರಚಿಸಬಹದು, ಈ ಕುರಿತು ಈಗಾಲೇ ನಾವು ಜಾಗೃತರಾಗಿರಬೇಕು ಎಂದು ಎಚ್ಚರಿಕೆ ರವಾನಿಸಿದರು.

ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮಾತನಾಡಿ, ಸದ್ಯಕ್ಕೆ ಭಯೋತ್ಪಾದಕ ಸಂಘಟನೆಗಳು ತಮ್ಮ ಸದಸ್ಯರಿಗೆ ತರಬೇತಿ ನೀಡಲು ಮುಂದಾಗಿದ್ದು, ಭಯೋತ್ಪಾದಕರನ್ನು ಸಜ್ಜುಗೊಳಿಸಲು ಸ್ಥಳ ಹುಡುಕಾಟದಲ್ಲಿ ತೊಡಗಿವೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.