ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಕೆಲಸ ಮಾಡುತ್ತಿರುವ ಮೂವರು ಗಗನಯಾತ್ರಿಗಳು ಶುಕ್ರವಾರ ಭೂಮಿಗೆ ಹಿಂತಿರುಗಲು ಪಯಣ ಆರಂಭಿಸಿದ್ದಾರೆ.
ನಾಸಾ ಗಗನಯಾತ್ರಿಗಳಾದ ಆಂಡ್ರ್ಯೂ ಮೋರ್ಗಾನ್ ಮತ್ತು ಜೆಸ್ಸಿಕಾ ಮೀಯರ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್‌ನ ಒಲೆಗ್ ಸ್ಕ್ರಿಪೋಚ್ಕಾ ಅವರು ಐಎಸ್‌ಎಸ್‌ನಿಂದ ಸೋಯುಜ್ ಎಂಎಸ್ -15 ಬಾಹ್ಯಾಕಾಶ ನೌಕೆಯಲ್ಲಿ 20.53 ಕೇಂದ್ರ ಸಮಯಕ್ಕೆ ಹೊರಟಿದ್ದಾರೆ.
ಮೋರ್ಗನ್ ಅವರ 272 ದಿನಗಳ ಮಿಷನ್ 2019 ರ ಜುಲೈ 20 ರಂದು ಪ್ರಾರಂಭವಾಗಿದ್ದರೆ, ಮೀರ್ ಮತ್ತು ಸ್ಕ್ರಿಪೋಚ್ಕಾ ಕಳೆದ ವರ್ಷ ಸೆಪ್ಟೆಂಬರ್ 25 ರಂದು ಭೂಮಿಯನ್ನು ತೊರೆದಿದ್ದರು.
ನಾಸಾ ಪ್ರಕಾರ, ಈ ಮೂವರು ಬೆಳಗ್ಗೆ 11: 30ಕ್ಕೆ ಸ್ವಲ್ಪ ಮೊದಲು ಕಜಕಿಸ್ತಾನದ ಹುಲ್ಲುಗಾವಲು ಮುಟ್ಟುವ ನಿರೀಕ್ಷೆಯಿದೆ.