ಜಗತ್ತಿನ ಅತಿ ಬಲಿಷ್ಠ ಮಿಲಿಟರಿ ಸಾಮರ್ಥ್ಯ ಹೊಂದಿರುವ ಬಿಗ್ ಬ್ರದರ್ ಅಮೆರಿಕ ಹಲವಾರು ರಾಷ್ಟ್ರಗಳಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿ, ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಕ್ಷಣ ಮಾತ್ರದಲ್ಲಿ ದಾಳಿ ಮಾಡುವ ಶಕ್ತಿಯನ್ನು ತನ್ನದಾಗಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಚೀನಾದ ಕಾಟ ಹೆಚ್ಚಾಗಿದೆ. ಜೊತೆಗೆ ಅಮೆರಿಕ-ಚೀನಾ ಸಂಬಂಧ ಹದಗೆಟ್ಟು ಹೋಗಿವೆ.
ಇದೆಲ್ಲದರ ಮಧ್ಯೆ ಜೂನ್ 15 ರಂದು ನಡೆದ ಭಾರತ-ಚೀನಾ ಸಂಘರ್ಷದ ನಂತರ ಅಮೆರಿಕ ಮತ್ತೂ ಅಲರ್ಟ್ ಆಗಿದ್ದು, ತನ್ನ ಸೇನಾನೆಲೆಗಳಲ್ಲಿನ ಸೈನಿಕರನ್ನು ಮರು ನಿಯೋಜಿಸುತ್ತಿದೆ. ಡಿಫೆನ್ಸ್ ಮ್ಯಾನ್ಪವರ್ ಮತ್ತು ಡೇಟಾ ಸೆಂಟರ್ ವರದಿಯ ಪ್ರಕಾರ, ಅಮೆರಿಕ ವಿಶ್ವದ 174 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಿಲಿಟರಿ ಬೇಸ್ಗಳನ್ನು ಸ್ಥಾಪಿಸಿದೆ. ಅಂಟಾರ್ಟಿಕಾ ಹೊರತುಪಡಿಸಿದರೆ ಇತರ ಎಲ್ಲ ಖಂಡಗಳಲ್ಲಿ ಒಟ್ಟು 400 ಯುಎಸ್ ಸೇನಾನೆಲೆಗಳಿವೆ. ಈ 400 ಸೇನಾ ನೆಲೆಗಳ ಸ್ಥಾಪನೆಗೆ ಅಮೆರಿಕ ಖರ್ಚು ಮಾಡಿದ್ದು ಬರೋಬ್ಬರಿ 749 ಬಿಲಿಯನ್ ಡಾಲರ್!
ಇತರ ದೇಶಗಳಲ್ಲಿರುವ ಅಮೆರಿಕ ಸೇನಾನೆಲೆಗಳ ಒಂದು ಪಕ್ಷಿನೋಟ
ದೇಶ | ಒಟ್ಟು ಅಮೆರಿಕ ಸೇನೆ | ಸೇನಾನೆಲೆಗಳ ಸಂಖ್ಯೆ | ವಿಸ್ತಾರ ಮತ್ತು ಮೌಲ್ಯ | ಅತಿದೊಡ್ಡ ಸೇನಾನೆಲೆ |
ಜಪಾನ್ | 62,572 | 86 | 114,981 ಎಕರೆ 98.2 ಬಿಲಿಯನ್ ಡಾಲರ್ ಮೌಲ್ಯ | ಕ್ಯಾಂಪ್ ಫ್ಯೂಜಿ ಜಪಾನ್ |
ಜರ್ಮನಿ | 46,831 | 87 | 6,405 ಎಕರೆ, 44.9 ಬಿಲಿಯನ್ ಡಾಲರ್ | ರಾಮಸ್ಟೀನ್ ಏರ್ ಬೇಸ್ |
ದಕ್ಷಿಣ ಕೊರಿಯಾ | 29,299 | 64 | 30,991 ಎಕರೆ, 24.5 ಬಿಲಿಯನ್ ಡಾಲರ್ | ಪಿಯಾಂಗ್ಟೆಕ್ Cpx ಪ್ರದೇಶ |
ಇಟಲಿ | 14,930 | 29 | 2,345 ಎಕರೆ, 9.6 ಬಿಲಿಯನ್ ಡಾಲರ್ | ಏವಿಯಾನೊ ಏರ್ ಬೇಸ್ |
ಗುವಾಮ್ | 11,165 | 3 | ಈ ದೇಶದ ಮೂರನೇ ಒಂದು ಭಾಗವು ಅಮೆರಿಕದ ನಿಯಂತ್ರಣದಲ್ಲಿದೆ. | ಆ್ಯಂಡರ್ಸನ್ ಏರ್ ಫೋರ್ಸ್ ಬೇಸ್ |
ಯುನೈಟೆಡ್ ಕಿಂಗಡಮ್ | 10,806 | 16 | 8,001 ಎಕರೆ, 7.9 ಬಿಲಿಯನ್ ಡಾಲರ್ | RAF ಲ್ಯಾಕೆನ್ಹೀಥ್ |
ಬಹ್ರೇನ್ | 4,588 | 10 | 204 ಎಕರೆ, 1.5 ಬಿಲಿಯನ್ ಡಾಲರ್ | ನೇವಿ ಸಪೋರ್ಟ್ ಆ್ಯಕ್ಟಿವಿಟಿ-ಲಿ |
ಸ್ಪೇನ್ | 3,654 | 2 | 9,390 ಎಕರೆ, 2.8 ಬಿಲಿಯನ್ ಡಾಲರ್ | ನೇವಲ್ ಸ್ಟೇಷನ್ ರೋಟಾ |
ಯುನೈಟೆಡ್ ಅರಬ್ ಎಮಿರೇಟ್ಸ್ | 2,525 | 1 | 36 ಎಕರೆ, 113.2 ಮಿಲಿಯನ್ ಡಾಲರ್ | ಜೆಬೆಲ್ ಅಲಿ |
ಕುವೈತ್ | 2,213 | 2 | 1.2 ಬಿಲಿಯನ್ ಡಾಲರ್ | ಕ್ಯಾಂಪ್ ಆರಿಫ್ ಜಾನ್ |
ಬೆಲ್ಜಿಯಂ | 1,880 | 9 | 1.5 ಬಿಲಿಯನ್ ಡಾಲರ್ | ಚಿವ್ರೆಸ್ ಏರ್ ಬೇಸ್ |
ಟರ್ಕಿ | 1,777 | 9 | 3,493 ಎಕರೆ, 2.7 ಬಿಲಿಯನ್ ಡಾಲರ್ | ಇನ್ಸಿರ್ಲಿಕ್ ಏರ್ ಬೇಸ್ |
ಒಟ್ಟು ಹೊರದೇಶಗಳಲ್ಲಿ ನಿಯೋಜಿತರಾಗಿರುವ ಅಮೆರಿಕ ಯೋಧರ ಸಂಖ್ಯೆ | 229,843 |