ETV Bharat / international

ಶಾರ್ಕ್ ಮೀನನ್ನು ಹೊತ್ತೊಯ್ಯುತ್ತಿರುವ ಪಕ್ಷಿ.. ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ!!

author img

By

Published : Jul 3, 2020, 3:53 PM IST

ಈ ವಿಡಿಯೋವನ್ನು 'ಟ್ರ್ಯಾಕಿಂಗ್​ ಶಾರ್ಕ್ಸ್' (Tracking Sharks) ಎಂಬ ಟ್ವಿಟರ್​ ಖಾತೆಯು ಶೇರ್​ ಮಾಡಿದ್ದು, ಆ ಹಕ್ಕಿಯನ್ನು ಗುರುತಿಸುವಂತೆ ಜನರಲ್ಲಿ ಕೇಳಿದೆ..

A bird holding Shark
ಶಾರ್ಕ್ ಮೀನನ್ನು ಹೊತ್ತೊಯ್ಯುತ್ತಿರುವ ಪಕ್ಷಿ

ದಕ್ಷಿಣ ಕೆರೊಲಿನಾ : ವಿಚಿತ್ರ ಘಟನೆಗಳಿಗೆ 2020 ಸಾಕ್ಷಿಯಾಗಿದೆ. ಇದೀಗ ವಿಚಿತ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಅಮೆರಿಕಾದ ದಕ್ಷಿಣ ಕೆರೊಲಿನಾದ ಮೈರ್ಟಲ್ ಬೀಚ್ ಬಳಿ ಬೃಹತ್​ ಗಾತ್ರದ ಹಕ್ಕಿಯೊಂದು ಶಾರ್ಕ್ ಮೀನನ್ನು ಹೊತ್ತುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಈ ಅಸಾಮಾನ್ಯ ದೃಶ್ಯವನ್ನು ಕೆಲ್ಲಿ ಬರ್ಬೇಜ್ ಎಂಬುವರು ಸೆರೆಹಿಡಿದಿದ್ದು, ವಿಡಿಯೋವನ್ನು ತಮ್ಮ ಫೇಸ್‌ಬುಕ್, ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ 14.8 ಮಿಲಿಯನ್ ವೀಕ್ಷಣೆ ಹಾಗೂ ಸಾವಿರಾರು ಕಮೆಂಟ್​ಗಳನ್ನು ಪಡೆದುಕೊಂಡಿದೆ.

ಈ ವಿಡಿಯೋವನ್ನು 'ಟ್ರ್ಯಾಕಿಂಗ್​ ಶಾರ್ಕ್ಸ್' (Tracking Sharks) ಎಂಬ ಟ್ವಿಟರ್​ ಖಾತೆಯು ಶೇರ್​ ಮಾಡಿದ್ದು, ಆ ಹಕ್ಕಿಯನ್ನು ಗುರುತಿಸುವಂತೆ ಜನರಲ್ಲಿ ಕೇಳಿದೆ. ಕಾಲುಗುರುಗಳಲ್ಲಿ ಸಿಕ್ಕಿಸಿಕೊಂಡು ಹಕ್ಕಿಯು ಶಾರ್ಕ್ ಮೀನನ್ನು ಹೊತ್ತೊಯ್ಯುತ್ತಿರುವ ದೃಶ್ಯ ನೆಟ್ಟಿಗರು ನಿಬ್ಬೆರಗಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.