ವಾಷಿಂಗ್ಟನ್: ಯುವಕನೊಬ್ಬನ ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದು 20 ಮಂದಿ ಸಾವಿಗೀಡಾದ ಘಟನೆ ಬೆನ್ನಲ್ಲೇ, ಮತ್ತೊಬ್ಬನ ಪೈಶಾಚಿಕ ದಾಳಿಯಲ್ಲಿ 9 ಮಂದಿ ಪ್ರಾಣಬಿಟ್ಟ ಘಟನೆ ಅಮೆರಿಕದಲ್ಲಿ ನಡೆದಿದೆ.
ಕಳೆದ 24 ಗಂಟೆಗಳೊಳಗೆ ಬೆಚ್ಚಿ ಬೀಳಿಸುವ ಎರಡು ಘಟನೆಗಳು ನಡೆದಿದ್ದು, ಜನರು ಆತಂಕಗೊಂಡಿದ್ದಾರೆ.
ಈ ಬಗ್ಗೆ ಡೆಟಾನ್ ಪೊಲೀಸರು ಟ್ವೀಟ್ ಮಾಡಿ, ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ 16 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಳಿದು ಬಂದಿದೆ.
ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿ ಯುವಕನನ್ನು ತಡೆದು, ಸಂಭವಿಸಬೇಕಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಸಂಸ್ಥೆ ತನಿಖೆ ನಡೆಸುತ್ತಿದೆ.