ETV Bharat / international

ಅಮೆರಿಕದ ಕೆಂಟುಕಿಯಲ್ಲಿ ಚಂಡಮಾರುತದ ಅಬ್ಬರ.. 50 ಜನರು ದುರ್ಮರಣ, ಹಲವರಿಗೆ ಗಾಯ - ಅಮೆರಿಕದ ಕೆಂಟುಕಿಯಲ್ಲಿ ಚಂಡಮಾರುತ

ಅಮೆರಿಕದ ಕೆಂಟುಕಿಯಲ್ಲಿ ಬೀಸಿರುವ ಚಂಡಮಾರುತದಿಂದಾಗಿ 50 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅನೇಕರ ಜನಜೀವನ ಅಸ್ತವ್ಯಸ್ತವಾಗಿದೆ.

Tornado Hits US State Of Kentucky
Tornado Hits US State Of Kentucky
author img

By

Published : Dec 11, 2021, 8:03 PM IST

ವಾಷಿಂಗ್ಟನ್​: ಅಮೆರಿಕದ ಕೆಂಟುಕಿಯಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ 50 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಏಕಾಏಕಿಯಾಗಿ ಚಂಡಮಾರುತ ಅಪ್ಪಳಿಸಿರುವ ಪರಿಣಾಮ ಕೆಂಟುಕಿಯಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಅನೇಕರು ತೊಂದರೆಗೊಳಗಾಗಿದ್ದಾರೆ ಎಂದು ಅಲ್ಲಿನ ಗವರ್ನರ್​​​ ಆ್ಯಂಡಿ ಬೆಶಿಯರ್​ ಮಾಹಿತಿ ನೀಡಿದ್ದಾರೆ. ಚಂಡಮಾರುತ ಬೀಸಿರುವ ಕಾರಣ ಅಮೆಜಾನ್​​ ವೇರ್​ಹೌಸ್​​​ನಲ್ಲಿ 100 ಕಾರ್ಮಿಕರು ಸಿಲುಕಿಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಕೆಂಟುಕಿ ಜೊತೆಗೆ ಇತರ ಪ್ರದೇಶಗಳಲ್ಲೂ ರಭಸವಾಗಿ ಗಾಳಿ ಬೀಸುತ್ತಿರುವ ಕಾರಣ ಅನೇಕರು ತೊಂದರೆಗೊಳಗಾಗಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಗೋವಾದಲ್ಲಿ TMC ಸರ್ಕಾರ ರಚಿಸುವ ಕಸರತ್ತು: ಮಹಿಳೆಯರ ಅಕೌಂಟ್​ಗೆ ತಿಂಗಳಿಗೆ 5 ಸಾವಿರ ರೂ. ನೀಡುವ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.