ಸಾವ್ಪೋಲ್: ಕ್ಷಣಾರ್ಧದಲ್ಲಿ ಕಳ್ಳರು 750 ಕೆಜಿ ಬಂಗಾರವನ್ನು ಲೂಟಿ ಮಾಡಿರುವ ಘಟನೆ ದಕ್ಷಿಣ ಅಮೆರಿಕಾದ ಸಾವ್ಪೋಲ್ ಏರ್ಪೋರ್ಟ್ನಲ್ಲಿ ನಡೆದಿದೆ.
ಗೌರುಲ್ಹೋಸ್ ವಿಮಾನ ನಿಲ್ದಾಣದಲ್ಲಿ ಖದೀಮರು ಗನ್ಗಳ ಮೂಲಕ ಕಾರಿನಲ್ಲಿ ಪೊಲೀಸ್ ವೇಷದಲ್ಲಿ ನುಗ್ಗಿದ್ದಾರೆ. ಬಳಿಕ ಅಲ್ಲಿದ್ದ ಸಿಬ್ಬಂದಿ ಬೆದರಿಸಿ ಯಂತ್ರಗಳ ಸಹಾಯದಿಂದ ಬಂಗಾರವನ್ನು ಕಾರಿನಲ್ಲಿ ಲೋಡ್ ಮಾಡಿ ಎಸ್ಕೇಪ್ ಆಗಿದ್ದಾರೆ.
- " class="align-text-top noRightClick twitterSection" data="">
ದರೋಡೆಕೋರರು ಸುಮಾರು 275.50 ಕೋಟಿ (40 ಮಿಲಿಯನ್ ಡಾಲರ್)ಗೂ ಹೆಚ್ಚು ಬೆಲೆ ಬಾಳುವ ಬಂಗಾರವನ್ನು(750 ಕೆ.ಜಿ) ಲೂಟಿ ಮಾಡಿದ್ದಾರೆ. ಇದರ ಜೊತೆ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಸಹ ದೋಚಿದ್ದಾರೆ. ಈ ಎಲ್ಲ ಘಟನೆ ಕ್ಷಣಾರ್ಧದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟಿಜೆನ್ಸ್ ಹೌಹಾರಿದ್ದಾರೆ.
ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಜಾಲ ಬೀಸಿದ್ದಾರೆ.