ETV Bharat / international

ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಮಿಲಿಟರಿ ಅಸ್ಥಿತ್ವ ಕೊನೆಗೊಂಡಿದೆ: ಜೋ ಬೈಡನ್ ಘೋಷಣೆ

author img

By

Published : Aug 31, 2021, 7:44 AM IST

ಹೊಸದಾಗಿ ಅಸ್ಥಿತ್ವಕ್ಕೆ ಬರುವ ತಾಲಿಬಾನ್ ಸರ್ಕಾರದಿಂದ ಅಂತಾರಾಷ್ಟ್ರೀಯ ಸಮುದಾಯ ಏನನ್ನು ನಿರೀಕ್ಷಿಸುತ್ತದೆ ಎಂಬ ಅಂಶಗಳನ್ನು ಒಳಗೊಂಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಸೂದೆ ರಚಿಸುವ ಕೆಲಸವನ್ನು ಮಾಡಲಾಗುತ್ತದೆ. ಇದರಲ್ಲಿ ಅತ್ಯಂತ ಮುಖ್ಯವಾಗಿ ಪ್ರಯಾಣ ಸ್ವಾತಂತ್ರ್ಯವನ್ನು ಉಲ್ಲೇಖಿಸಲಾಗುತ್ತದೆ ಎಂದು ಬೈಡನ್ ತಿಳಿಸಿದ್ದಾರೆ.

biden
biden

ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಮಿಲಿಟರಿ ನಿಯೋಜನೆ ಕೊನೆಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಘೋಷಿಸಿದ್ದಾರೆ. ನಿಗದಿತ ಅವಧಿಗೂ ಮುನ್ನ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದ ಕಾರಣಕ್ಕಾಗಿ ಸಶಸ್ತ್ರ ಪಡೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಮಿಲಿಟರಿ ನಿಯೋಜನೆ ಅಂತ್ಯಗೊಳಿಸುವುದು ಉತ್ತಮ ಮಾರ್ಗವಾಗಿತ್ತು. ಎಲ್ಲಾ ವಿಭಾಗಗಳ ಜಂಟಿ ಮುಖ್ಯಸ್ಥರು ಮತ್ತು ನಮ್ಮ ಎಲ್ಲಾ ಕಮಾಂಡರ್‌ಗಳ ಸರ್ವಾನುಮತದ ಶಿಫಾರಸಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲಿ ಈಗ ವಾಯುಪಡೆ ನಿರ್ಗಮಿಸಿದ್ದು, ಅಫ್ಘಾನಿಸ್ತಾನದಿಂದ ಹೊರಡುವವರಿಗೆ ರಕ್ಷಣೆ ಒದಗಿಸುವುದು ಅವರ ಕರ್ತವ್ಯ. ಈ ಕರ್ತವ್ಯ ಪೂರ್ಣಗೊಂಡಿದೆ ಎಂದು ಬೈಡನ್ ತಿಳಿಸಿದ್ದಾರೆ.

ಅಮೆರಿಕದ ಮಿತ್ರರಾಷ್ಟ್ರಗಳು, ಅಫ್ಘಾನಿಸ್ತಾನದೊಂದಿಗೆ ವ್ಯವಹಾರ ಹೊಂದಿರುವ ರಾಷ್ಟ್ರಗಳು ಮತ್ತು ವಿದೇಶಿಗರು ಅಫ್ಘನ್​ನಿಂದ ಹೊರಡಲು ಅನುವಾಗುವಂತೆ ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ಸುರಕ್ಷತೆ ಒದಗಿಸುವ ಬಗ್ಗೆ ಈಗಾಗಲೇ ವಿದೇಶಾಂಗ ಇಲಾಖೆಯ ಮುಖ್ಯಸ್ಥರನ್ನು ಕೇಳಿದ್ದೇನೆ ಎಂದು ಬೈಡನ್ ಹೇಳಿದ್ದಾರೆ.

ಈಗ ಅಸ್ಥಿತ್ವದಲ್ಲಿರುವ ತಾಲಿಬಾನ್ ಸರ್ಕಾರದಿಂದ ಅಂತಾರಾಷ್ಟ್ರೀಯ ಸಮುದಾಯ ಏನನ್ನು ನಿರೀಕ್ಷಿಸುತ್ತದೆ ಎಂಬ ಅಂಶಗಳನ್ನು ಒಳಗೊಂಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಸೂದೆ ರಚಿಸುವ ಕೆಲಸವನ್ನು ಮಾಡಲಾಗುತ್ತದೆ. ಇದರಲ್ಲಿ ಅತ್ಯಂತ ಮುಖ್ಯವಾಗಿ ಪ್ರಯಾಣ ಸ್ವಾತಂತ್ರ್ಯವನ್ನು ಉಲ್ಲೇಖಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ, ಅಮೆರಿಕ ಸೇನಾ ಪಡೆಯನ್ನು ಜೋ ಬೈಡನ್ ಪ್ರಶಂಸಿಸಿದ್ದು, ಧನ್ಯವಾದ ತಿಳಿಸಿದ್ದಾರೆ. ಮೊದಲನೆಯದಾಗಿ ಕಾಬೂಲ್​ನಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಏರ್​ಲಿಫ್ಟ್​ ಅನ್ನು ಮಿಲಿಟರಿಯನ್ನು ನಿರ್ವಹಿಸಿದ ರೀತಿ ಮತ್ತು ವಿಮಾನ ನಿಲ್ದಾಣಕ್ಕೆ ಒದಗಿಸಿದ ಭದ್ರತಾ ಕಾರ್ಯವನ್ನು ಕೊಂಡಾಡಿದ್ದಾರೆ.

ಮಿಲಿಟರಿ ಜೊತೆಗೆ ಅಫ್ಘನ್​ನಿಂದ ಬೇರೆಡೆಗೆ ತೆರಳಲು ಇಚ್ಚಿಸಿದವರನ್ನು ಗುರುತಿಸಲು ಕೆಲಸ ಮಾಡಿದ ಸ್ವಯಂಸೇವಕರು ಮತ್ತು ಪರಿಣತರಿಗೆ ಮತ್ತು ಅಮೆರಿಕದ ಜೊತೆಗೆ ಸಹಕಾರ ನೀಡಿದ ವಿವಿಧ ರಾಷ್ಟ್ರಗಳಿಗೆ ಬೈಡನ್ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: Kabul : ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮಕ್ಕಳು ಸೇರಿ 10 ಜನರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.