ತೆಗುಚಿಗಲ್ಪಾ: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹಲವಾರು ಹಿಂಸಾತ್ಮಕ ಘಟನೆಗಳು ಸಂಭವಿಸಿ 18 ಜನರು ಸಾವನ್ನಪ್ಪಿರುವ ಘಟನೆ ಮಧ್ಯೆ ಅಮೆರಿಕಾದ ಹೊಂಡುರಾಸ್‌ನಲ್ಲಿ ನಡೆದಿದೆ.
ರಾಷ್ಟ್ರೀಯ ಪೊಲೀಸ್ ಡೆಪ್ಯೂಟಿ ಇನ್ಸ್‌ಪೆಕ್ಟರ್ ರಿಗೊಬೆರ್ಟೊ ರೊಡ್ರಿಗಸ್ ನೀಡಿದ ಮಾಹಿತಿ ಪ್ರಕಾರ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ವಿವಿಧೆಡೆ ಹಿಂಸಾಚಾರ ನಡೆದಿದೆ. ಈ ವೇಳೆ, 18 ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಇನ್ನು ಹೊಂಡುರಾಸ್‌ನಲ್ಲಿ 2019 ರ ಪ್ರಮಾಣಕ್ಕಿಂತಲೂ ನರ ಹತ್ಯೆಗಳು ಕಡಿಮೆಯಾಗಿವೆ. 2020 ರಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಒಟ್ಟು ಸಾವುಗಳು 3,482 ಆಗಿದ್ರೆ, 2019 ರಲ್ಲಿ 4,082 ಸಾವುಗಳು ವರದಿಯಾಗಿವೆ ಎಂದು ಅಧಿಕಾರಿ ಹೇಳಿದರು.
ಸಾಮಾನ್ಯವಾಗಿ, 2020ರಲ್ಲಿ 100,000 ನಿವಾಸಿಗಳಿಗೆ 37 ನರಹತ್ಯೆಗಳು ನಡೆದಿವೆ. ಆದರೆ 2019 ರಲ್ಲಿ 100,000 ನಿವಾಸಿಗಳಿಗೆ ಸರಾಸರಿ 44.5 ಕೊಲೆಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.