ನವದೆಹಲಿ: ವಿಶ್ವದಲ್ಲಿ ಕೊರೊನಾ ವೈರಸ್ ತೀವ್ರ ಆತಂಕ ಸೃಷ್ಟಿಸುತ್ತಿದ್ದು ಇಂದು 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈವರೆಗೂ ಕೊರೊನಾ ಸೋಂಕು ವಿಶ್ವವ್ಯಾಪಿ 2,70,880 ಮಂದಿಯನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ ಒಟ್ಟು 39,30,630 ಇದ್ದು, ಇವರಲ್ಲಿ 13,48,434 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಸದ್ಯಕ್ಕೆ 23,11,316 ಲಕ್ಷ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಮೆರಿಕದಲ್ಲಿ 12,92,879 ಮಂದಿಗೆ ಸೋಂಕು ತಗುಲಿದ್ದು 76,942 ಮಂದಿ ಅಸುನೀಗಿದ್ದಾರೆ. 2,17,251 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಸೋಂಕಿತರ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದ್ದು ಒಟ್ಟು 2,56,855 ಸೋಂಕಿತರಿದ್ದು, 26,070 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 1,63,919 ಸೋಂಕಿತರು ಗುಣಮುಖರಾಗಿದ್ದಾರೆ.
ಸೋಂಕಿತರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಇಟಲಿ ಇದ್ದು, 2,15,858 ಸೋಂಕಿತರಲ್ಲಿ 29,958 ಮಂದಿ ಅಸುನೀಗಿದ್ದಾರೆ. 96,276 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಂತರದ ಸ್ಥಾನದಲ್ಲಿ ಇಂಗ್ಲೆಂಡ್ ರಷ್ಯಾ, ಫ್ರಾನ್ಸ್, ಜರ್ಮನಿ ರಾಷ್ಟ್ರಗಳಿವೆ.
ಇನ್ನು ಚೀನಾದಲ್ಲಿ ಇಂದು ಒಂದೇ ಒಂದು ಸೋಂಕಿನ ಪ್ರಕರಣ ಪತ್ತೆಯಾಗಿದೆ. ಕೊರೊನಾ ಕೇಂದ್ರ ಬಿಂದುವಾಗಿದ್ದ ಈ ದೇಶದಲ್ಲಿ ಒಟ್ಟು 82,886 ಸೋಂಕಿತರಿದ್ದು, ಅದರಲ್ಲಿ 4,633 ಸೋಂಕಿತರು ಸಾವನ್ನಪ್ಪಿದ್ದಾರೆ. 77,993 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈಗ 260 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ನಂತರ ಚೀನಾ ಕೊರೊನಾ ಮುಕ್ತವಾಗಲಿದೆ.