ಮಿಯಾಮಿ: ಆರ್ಟ್ ಬೇಸೆಲ್ನಲ್ಲಿ ಮಾರಾಟ ಆಗಿದ್ದ ₹ 85 ಲಕ್ಷ (1.20 ಲಕ್ಷ ಡಾಲರ್) ಮೌಲ್ಯದ ಬಾಳೆಹಣ್ಣನ್ನು ಓರ್ವ ವ್ಯಕ್ತಿ ತಿಂದಿದ್ದಾನೆ.
ಇಟಲಿಯ ಕಲಾವಿದ ಮೌರಿಜಿಯೋ ಕ್ಯಾಟೆಲನ್ ಎಂಬುವವರು ಮಿಯಾಮಿ ಬೀಚಚ್ನ ಆರ್ಟ್ ಬೇಸೆಲ್ನಲ್ಲಿ ಬಾಳೆಹಣ್ಣಿನ ಕಲಾಕೃತಿ ಮಾರಾಟಕ್ಕೆ ಇಟ್ಟಿದ್ದರು. ಕಲಾಕೃತಿ ಪ್ರದರ್ಶನದಲ್ಲಿ ಖಾಲಿಯಿರುವ ಬಿಳಿಗೋಡೆಗೆ ಟೇಪ್ನಿಂದ ಅಂಟಿಸಿದ್ದ 'ಕಾಮಿಡಿಯನ್' ಹೆಸರಿನ ಬಾಳೆಹಣ್ಣು ಬರೋಬರಿ ₹ 85 ಲಕ್ಷಕ್ಕೆ ಮಾರಾಟ ಆಗಿತ್ತು.
- " class="align-text-top noRightClick twitterSection" data="
">
ಆ ಬಾಳೆಹಣ್ಣು ನೋಡಲು ಜನಸಾಗರವೇ ಹರಿದು ಬಂದು ಅದರ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದರು. ಅಂಟಿಸಿದ್ದ ಬಾಳೆಹಣ್ಣಿನ ಕಲಾಕೃತಿಗೆ ಕಲಾರಸಿಕರು ಮಾರುಹೋಗಿದ್ದರು. ಕಲಾಕೃತಿ ಪ್ರದರ್ಶನ ವಿಕ್ಷೀಸಲು ಬಂದಿದ್ದ ಅಮೆರಿಕದ ಕಲಾವಿದ ಡೇವಿಡ್ ಡಾಟೂನಾ ಎಂಬುವವರು ಗೋಡೆಗೆ ಅಂಟಿಸಿದ್ದ ಬಾಳೆಹಣ್ಣನ್ನು ತಿಂದಿದ್ದಾರೆ.
ಡಾಟೂನಾ ತನ್ನ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ ಗೋಡೆಗೆ ಅಂಟಿಸಿದ್ದ ಬಾಳೆಹಣ್ಣಿನ್ನು ತೆಗೆದು ಸಿಪ್ಪೆ ಸುಲಿದು ತಿಂದು, "ಹಸಿದ ಕಲಾವಿದನ ಕಲಾ ಪ್ರದರ್ಶನ. ಮೌರಿಜಿಯೋ ಕ್ಯಾಟೆಲನ್ನ ಕಲಾಕೃತಿ ನನಗೆ ಇಷ್ಟ. ಈ ರೀತಿಯಾಗಿ ಅಂಟಿಸಿದ್ದು ತುಂಬ ಇಷ್ಟವಾಯಿತು. ತುಂಬ ರುಚಿಯಾಗಿದೆ ಇದು' ಎಂದು ಹೇಳಿದ್ದಾನೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.
'ಅವರು (ಡೇವಿಡ್ ಡಾಟೂನಾ) ಕಲಾಕೃತಿಯನ್ನು ನಾಶ ಮಾಡಲಿಲ್ಲ. ಬಾಳೆಹಣ್ಣು ಇರುವುದು ತಿನ್ನುವುದಕ್ಕಾಗಿ. ಇದುವೇ ಅದರ ಕಲ್ಪನೆ' ಎಂದು ಮ್ಯೂಸಿಯಂ ನಿರ್ದೇಶಕ ಗ್ಯಾಲರಿ ಪೆರೋಟಿನ್ ಅವರು ಡಾಟೂನಾ ನಡೆ ಬೆಂಬಲಿಸಿದ್ದಾರೆ ಎಂಬುದು ವರದಿಯಾಗಿದೆ.