ವಾಷಿಂಗ್ಟನ್: ದಕ್ಷಿಣ ಫ್ಲೋರಿಡಾದ ಮಿಯಾಮಿ ಬೀಚ್ ಬಳಿ 12 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿದೆ. ಈ ದುರಂತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ 10 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ನೂರಾರು ಮಂದಿ ಸಿಲುಕಿದ್ದಾರೆ ಎನ್ನಲಾಗಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
-
Dozens of people are unaccounted for after a beachfront building partially collapsed in Florida. Aerial views from the scene: https://t.co/KVvChNf6D4 📷 @mabellog pic.twitter.com/n5u6Monv6P
— Reuters Pictures (@reuterspictures) June 24, 2021 " class="align-text-top noRightClick twitterSection" data="
">Dozens of people are unaccounted for after a beachfront building partially collapsed in Florida. Aerial views from the scene: https://t.co/KVvChNf6D4 📷 @mabellog pic.twitter.com/n5u6Monv6P
— Reuters Pictures (@reuterspictures) June 24, 2021Dozens of people are unaccounted for after a beachfront building partially collapsed in Florida. Aerial views from the scene: https://t.co/KVvChNf6D4 📷 @mabellog pic.twitter.com/n5u6Monv6P
— Reuters Pictures (@reuterspictures) June 24, 2021
ಭಾರತೀಯ ಕಾಲಮಾನ ಶುಕ್ರವಾರ ಮುಂಜಾನೆ 1.30 ರ ಸುಮಾರಿಗೆ ಕಟ್ಟಡದ ಈಶಾನ್ಯ ಭಾಗದಲ್ಲಿರುವ ಕಾರಿಡಾರ್ ಸಂಪೂರ್ಣ ಕುಸಿಯಿತು. ಸರ್ಕಾರದಿಂದ ಅನುಮೋದಿತ ಕೆಲಸದ ಪರವಾನಗಿ ನೀಡಿದ ಮರುದಿನವೇ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ದೊರೆತಿದೆ.
ಇನ್ನು ದುರ್ಘಟನೆಗೆ ನಿಖರವಾದ ಕಾರಣವನ್ನು ತಿಳಿಯಲು ಸಮಯ ಬೇಕಾಗುತ್ತದೆ ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟ್ರಿಸ್ ಹೇಳಿದ್ದಾರೆ.
ಫೆಡರಲ್ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಯ ಸಹಯೋಗದೊಂದಿಗೆ ತ್ವರಿತ ರಕ್ಷಣಾ ಕಾರ್ಯಾಚರಣೆಗೆ ಶ್ವೇತಭವನ ಕರೆ ನೀಡಿದೆ. ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ಸಂಪೂರ್ಣ ಕಟ್ಟಡವೂ ಕುಸಿಯುವ ಭೀತಿ ಎದುರಾಗಿದೆ.