ETV Bharat / international

ಅಲ್ಜೀರಿಯಾದಲ್ಲಿ ಭಾರಿ ಕಾಡ್ಗಿಚ್ಚು; 25 ಸೈನಿಕರು ಸೇರಿ 40ಕ್ಕೂ ಅಧಿಕ ಮಂದಿ ಸಜೀವ ದಹನ!

ಅಲ್ಜೀರಿಯಾ ರಾಜಧಾನಿ ಅಲ್ಜಿಯರ್ಸ್‌ನ ಪೂರ್ವದ ಕಾಡಿನಲ್ಲಿ ಉಂಟಾಗಿರುವ ಬೆಂಕಿಗೆ 25 ಸೇರಿ 40ಕ್ಕೂ ಅಧಿಕ ಮಂದಿ ಸಂಜೀವ ದಹನವಾಗಿರುವ ದಾರುಣ ಘಟನೆ ವರದಿಯಾಗಿದೆ.

Wildfires in Algeria: dozens of civilians and soldiers reported dead
ಅಲ್ಜೀರಿಯಾದಲ್ಲಿ ಭಾರಿ ಕಾಡ್ಗಿಚ್ಚು; 25 ಸೈನಿಕರ ಸೇರಿ 40ಕ್ಕೂ ಅಧಿಕ ಮಂದಿ ಸಜೀವ ದಹನ!
author img

By

Published : Aug 11, 2021, 5:17 AM IST

Updated : Aug 11, 2021, 6:05 AM IST

ಅಲ್ಜಿಯರ್ಸ್: ಅಲ್ಜೀರಿಯಾದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ರಾಜಧಾನಿಯ ಪೂರ್ವದಲ್ಲಿ ಭುಗಿಲೆದ್ದ ಕಾಡ್ಗಿಚ್ಚಿನಲ್ಲಿ 25 ಸೈನಿಕರು ಸೇರಿದಂತೆ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘೋರ ದುರಂತ ಸಂಭವಿಸಿದೆ.

ಅಲ್ಲಿನ ದೂರದರ್ಶನಕ್ಕೆ ಮಾಹಿತಿ ನೀಡಿರುವ ಪ್ರಧಾನಿ ಅಯ್ಮಾನ್‌ ಬೆನಾಬ್ದೆರ್‌ರೆಹ್ಮಾನ್‌, ಸರ್ಕಾರವು ಅಂತಾರಾಷ್ಟ್ರೀಯ ಸಮುದಾಯದಿಂದ ಸಹಾಯ ಕೇಳಿದೆ ಹಾಗೂ ಬೆಂಕಿಯನ್ನು ನಂದಿಸಲು ವಿಮಾನಗಳನ್ನು ಬಾಡಿಗೆಗೆ ಪಡೆಯಲು ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಈವರೆಗೆ 42 ಸಾವುಗಳ ವರದಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಕಬೈಲ್ ಪ್ರದೇಶ ಮತ್ತು ಇತರೆಡೆಗಳಲ್ಲಿ ಕಳೆದ ಸೋಮವಾರ ಹತ್ತಾರು ಕಡೆ ಬೆಂಕಿ ಆರಂಭವಾಯಿತು. ಮತ್ತು ಅಧಿಕಾರಿಗಳು ಸೈನ್ಯವನ್ನು ಕಳುಹಿಸಿ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರಿಗೆ ನೆರವು ನೀಡುವಂತೆ ಸೂಚಿಸಿದ್ದಾರೆ. ಬೆಂಕಿ ಕಾಣಿಸಿಕೊಂಡಿರುವ ಪ್ರದೇಶದ ಸಮೀಪದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲಾಗಿದೆ. ಭಾರಿ ಕಾಡ್ಗಿಚ್ಚಿನಲ್ಲಿ ಜಾನುವಾರು ಹಾಗೂ ಇತರೆ ಪ್ರಾಣಿ ಪಕ್ಷಿಗಳು ಮೃತ ಪಟ್ಟಿವೆ ಎನ್ನಲಾಗಿದೆ.

Last Updated : Aug 11, 2021, 6:05 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.