ETV Bharat / international

'ಒಮಿಕ್ರೋನ್​' ಕಾರಣಕ್ಕೆ ದಕ್ಷಿಣ ಆಫ್ರಿಕಾ ಪ್ರತ್ಯೇಕಿಸುವುದು ಸರಿಯಲ್ಲ: ಪ್ರೊ. ಅಬ್ದುಲ್ ಕರೀಮ್ - ಪ್ರೊ. ಅಬ್ದುಲ್ ಕರೀಮ್ ಸಲಹೆ

ಈ ವೈರಸ್​ಗೆ​ ಹೆಚ್ಚಿನ ಪ್ರಸರಣ ಸಾಮರ್ಥ್ಯ ಇದೆ ಎಂಬುದನ್ನು ನಾವು ನಿರೀಕ್ಷಿಸಬಹುದು. ವಾರದ ಅಂತ್ಯದ ವೇಳೆಗೆ ನಾವು 10,000 ಪ್ರಕರಣಗಳನ್ನು ಕಾಣಲೂ ಬಹುದು ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊ. ಅಬ್ದುಲ್​​ ಕರೀಮ್ ತಿಳಿಸಿದ್ದಾರೆ.

omicron
'ಓಮಿಕ್ರಾನ್'
author img

By

Published : Dec 1, 2021, 10:08 PM IST

ಜೋಹಾನ್ಸ್‌ಬರ್ಗ್: 'ಒಮಿಕ್ರೋನ್​' ರೂಪಾಂತರ ಕೊರೊನಾ ಸೋಂಕಿನ ಕಾರಣಕ್ಕೆ ದಕ್ಷಿಣ ಆಫ್ರಿಕಾವನ್ನು ಪ್ರತ್ಯೇಕಿಸುವುದರಿಂದ ವೈರಸ್​ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಈಗಾಗಲೇ, ಇತರ ರಾಷ್ಟ್ರಗಳಲ್ಲೂ ಈ ವೈರಸ್​ ರೂಪಾಂತರ ಪತ್ತೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊ. ಅಬ್ದುಲ್-ಕರೀಮ್ ತಿಳಿಸಿದ್ದಾರೆ.

ಈಗಾಗಲೇ ಸುಮಾರು 20 ದೇಶಗಳು ದಕ್ಷಿಣ ಆಫ್ರಿಕಾ ಮತ್ತು ಅದರ ನೆರೆಯ ರಾಷ್ಟ್ರಗಳ ಮೇಲೆ ಅಂತಾರಾಷ್ಟ್ರೀಯ ಪ್ರಯಾಣ ನಿಷೇಧ ಹೇರಿರುವ ಬಗ್ಗೆ ಅಬ್ದುಲ್-ಕರೀಮ್ ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ 11 ದೇಶಗಳು ಒಮಿಕ್ರೋನ್​ ಪ್ರಕರಣಗಳನ್ನು ವರದಿ ಮಾಡಿವೆ. ಆದ್ದರಿಂದ, ದಕ್ಷಿಣ ಆಫ್ರಿಕಾವನ್ನು ಪ್ರತ್ಯೇಕಿಸಲು ಪ್ರಯತ್ನಿಸುವುದರಿಂದ ವೈರಸ್​ ಹರಡುವಿಕೆ ತಡೆಯಲು ನಿಜವಾಗಿಯೂ ಸಹಾಯ ಮಾಡುವುದಿಲ್ಲ. ಏಕೆಂದರೆ, ಶೀಘ್ರದಲ್ಲೇ ಇತರ ಹಲವು ದೇಶಗಳು ವೈರಸ್ ಹರಡುವ ಮಾರ್ಗಗಳಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಮ್ಮ ದೇಶ ಕೊರೊನಾ ರೂಪಾಂತರದೊಂದಿಗೆ ವ್ಯವಹರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಾವು ಇಂತಹ ಹಲವು ರೂಪಾಂತರ ವೈರಸ್​ಗಳೊಂದಿಗೆ ಹೋರಾಡಿದ್ದೇವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಈ ವೈರಸ್​ನಿಂದ ಹೇಗೆ ಪಾರಾಗಬಹುದು ಎಂಬುದು ನಮಗೆ ತಿಳಿದಿದೆ' ಎಂದಿದ್ದಾರೆ.

ಹೊಸ ವೈರಸ್​ನ ಬೆದರಿಕೆಯ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ನಿಲ್ಲಬೇಕಾದ ಸಂದರ್ಭದಲ್ಲಿ, ನಾವು ಪರಸ್ಪರರ ವಿರುದ್ಧ ನಿಲ್ಲುತ್ತೇವೆ. ನಾವು ಇದನ್ನು ನಿಭಾಯಿಸುವ ಬದಲು ನಮ್ಮ ನಡುವೆ ಬೇಲಿಗಳನ್ನು ಹಾಕಿಕೊಳ್ಳುತ್ತೇವೆ. ಶತ್ರು ಯಾವುದು? ಮತ್ತು ನಾವು ಅದನ್ನು ಹೇಗೆ ಒಟ್ಟಿಗೆ ನಿಭಾಯಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಓದಿ: ತಂದೆಯ ಗನ್ ತಂದು ವಿದ್ಯಾರ್ಥಿಗಳ ಮೇಲೆ ಗುಂಡಿನ ಸುರಿಮಳೆ: ಮೂವರು ಸಾವು, ಹಲವರ ಸ್ಥಿತಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.