ETV Bharat / international

ಉಗ್ರರ ದಾಳಿಗೆ ನೈಜರ್​ನಲ್ಲಿ ನೂರು ಮಂದಿ ಬಲಿ.. ರಾಷ್ಟ್ರಾದ್ಯಂತ 3 ದಿನ ಮೌನಾಚರಣೆ - ನೈಜರ್ ರಾಷ್ಟ್ರಾದ್ಯಂತ ಮೌನಾಚರಣೆ

ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನ ಪ್ರಾಥಮಿಕ ಫಲಿತಾಂಶಗಳನ್ನು ಪ್ರಕಟಿಸಿದ ದಿನವೇ ಉಗ್ರಯ ಈ ಕೃತ್ಯ ಎಸಗಿದ್ದರು. ಘಟನೆಯಲ್ಲಿ ಸುಮಾರು 100 ಮಂದಿ ನಾಗರಿಕರು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ..

Niger
ಉಗ್ರರ ದಾಳಿಗೆ ನೈಜರ್​ನಲ್ಲಿ ನೂರು ಮಂದಿ ಬಲಿ
author img

By

Published : Jan 5, 2021, 6:51 AM IST

ನಿಯಾಮಿ (ನೈಜರ್): ಶಸ್ತ್ರ ಸಜ್ಜಿತ ಉಗ್ರರ ಗುಂಪೊಂದು ನೈಜರ್​ನ ಎರಡು ಗ್ರಾಮಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 100 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಸಾವಿಗೆ ಸಂತಾಪ ಸೂಚಿಸಿರುವ ನೈಜರ್ ಸರ್ಕಾರ ರಾಷ್ಟ್ರಾದ್ಯಂತ ಮೂರು ದಿನಗಳ ಕಾಲ ಮೌನಾಚರಣೆ ಮಾಡುವಂತೆ ಕರೆ ನೀಡಿದೆ.

ಮಾಲಿ ಹಾಗೂ ನೈಜರ್​ ಗಡಿಭಾಗದ ಚಾಮೊ-ಬಂಗೌ ಮತ್ತು ಜಾರೌಮ್‌ಡರೆ ಎಂಬ ಗ್ರಾಮಗಳ ಮೇಲೆ ಶನಿವಾರ ಉಗ್ರರು ದಾಳಿ ನಡೆಸಿದ್ದರು. ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನ ಪ್ರಾಥಮಿಕ ಫಲಿತಾಂಶಗಳನ್ನು ಪ್ರಕಟಿಸಿದ ದಿನವೇ ಉಗ್ರಯ ಈ ಕೃತ್ಯ ಎಸಗಿದ್ದರು.

ಘಟನೆಯಲ್ಲಿ ಸುಮಾರು 100 ಮಂದಿ ನಾಗರಿಕರು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ದಿನ 628 ಹಕ್ಕಿಗಳು ಬಲಿ: ಜ್ವರಕ್ಕೆ 2,401 ವಲಸೆ ಹಕ್ಕಿಗಳು ಸಾವು!

ನೈಜರ್‌ನ ಆಡಳಿತ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಬಜೌಮ್ ಅವರು ಶೇ.39.33ರಷ್ಟು ಮತಗಳನ್ನು ಗಳಿಸಿ ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿರುವ ನೈಜರ್‌ ಮಾಜಿ ಅಧ್ಯಕ್ಷ ಮಹಮನೆ ಔಸ್ಮಾನೆ ಶೇ.17ರಷ್ಟು ಮತಗಳನ್ನು ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.