ETV Bharat / international

ಉಗ್ರರ ಗುಂಡಿನ ದಾಳಿಗೆ 58 ನಾಗರಿಕರ ದುರ್ಮರಣ! - ನೈಗರ್ ನಾಗರಿಕೆ ಮೇಲೆ ಉಗ್ರರ ದಾಳಿ

ಮಾರಣಹೋಮದ ಬಗ್ಗೆ ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆ ತಾನು ಹೊಣೆ ಎಂದು ಹೇಳಿಕೊಂಡಿಲ್ಲ. ಗ್ರೇಟರ್ ಸಹಾರಾ ಗ್ರೂಪ್​ ಪ್ರದೇಶದಲ್ಲಿರುವ ಇಸ್ಲಾಮಿಕ್ ಸ್ಟೇಟ್​ಗೆ ಸೇರಿದ ಉಗ್ರಗಾಮಿಗಳ ತಂಡ ತಿಲ್ಲಾಬೆರಿ ವ್ಯಾಪ್ತಿಯಲ್ಲಿ ಬಹಳಷ್ಟು ಸಕ್ರಿಯವಾಗಿದೆ.

Gunmen
Gunmen
author img

By

Published : Mar 17, 2021, 10:03 AM IST

ನಿಯಾಮಿ (ನೈಗರ್​): ಪಶ್ಚಿಮ ಆಫ್ರಿಕಾದ ನೈಗರ್ ದೇಶದ ನಿಯಾಮಿ ಸಮೀಪದ ಮಾರುಕಟ್ಟೆ ದಿನದಂದು ನಾಗರಿಕರ ಗುಂಪಿನ ಮೇಲೆ ಮೋಟಾರ್ ಸೈಕಲ್​ಗಳಲ್ಲಿ ಬಂದ ಬಂದೂಕುಧಾರಿಗಳು ಏಕಾಏಕಿ ದಾಳಿ ನಡೆಸಿ ಕನಿಷ್ಠ 58 ಜನರನ್ನು ಕೊಂದು ಹಾಕಿದ್ದಾರೆ.

ಉಗ್ರ ಕೃತ್ಯಕ್ಕೆ ಬಲಿಯಾದವರು ಮಾರುಕಟ್ಟೆಯಿಂದ ಧಾನ್ಯಗಳನ್ನು ಕೊಂಡೊಯ್ಯುತ್ತಿದ್ದರು. ಅವೆಲ್ಲವನ್ನೂ ನೆಲಕ್ಕೆ ಚೆಲ್ಲಿ ಸುಟ್ಟುಹಾಕಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ.

ಈ ಮಾರಣಹೋಮದ ಬಗ್ಗೆ ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆ ತಾನು ಹೊಣೆ ಎಂದು ಹೇಳಿಕೊಂಡಿಲ್ಲ. ಆದರೂ ಗ್ರೇಟರ್ ಸಹಾರಾ ಗ್ರೂಪ್​ ಪ್ರದೇಶದಲ್ಲಿರುವ ಇಸ್ಲಾಮಿಕ್ ಸ್ಟೇಟ್​ಗೆ ಸೇರಿದ ಉಗ್ರಗಾಮಿಗಳ ತಂಡ ತಿಲ್ಲಾಬೆರಿ ವ್ಯಾಪ್ತಿಯಲ್ಲಿ ಬಹಳಷ್ಟು ಸಕ್ರಿಯವಾಗಿದೆ.

ಇದನ್ನೂ ಓದಿ: ಸೆಪ್ಟಿಕ್​ ಟ್ಯಾಂಕ್​ ಅಗೆಯುವಾಗ ಮಣ್ಣು ಕುಸಿದು ಐವರು ಬಲಿ

ಆಗಾಗ ಹಿಂಸಾಚಾರ ನಡೆಯುವ ಮಾಲಿಯೊಂದಿಗೆ ಹೊಂದಿಕೊಂಡಿರುವ ನೈಗರ್​ ಗಡಿಯ ಹತ್ತಿರದ ಬಾನಿಬೊಂಗೊ ಎಂಬಲ್ಲಿನ ಮಾಂಸ ಮಾರುಕಟ್ಟೆಯಿಂದ ಸಾಮಾನುಗಳನ್ನು ಖರೀದಿಸಿ ನಾಗರಿಕರು ಮರಳುತ್ತಿರುವಾಗ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ.

ಸರ್ಕಾರಿ ವಕ್ತಾರ ಅಬ್ದುರ್​ ರೆಹಮಾನ್ ಜಕಾರಿಯಾ ಅವರು ಘಟನೆಯನ್ನು ಖಂಡಿಸಿದ್ದು, ಮೃತರ ಸ್ಮರಣಾರ್ಥ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.