ETV Bharat / international

ಚಿನ್ನದ ಗಣಿಯಲ್ಲಿ ಸ್ಫೋಟ: 59 ಮಂದಿ ಮೃತ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

author img

By

Published : Feb 22, 2022, 4:29 AM IST

ಚಿನ್ನವನ್ನು ಸಂಸ್ಕರಿಸಲು ಬಳಸಲಾದ ರಾಸಾಯನಿಕಗಳಿಂದ ಬುರ್ಕಿನಾ ಫಾಸೋದ ಚಿನ್ನದ ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು, 59 ಮಂದಿ ಮೃತಪಟ್ಟಿದ್ದಾರೆ.

Gold mining site blast reportedly kills 59 in Burkina Faso
ಚಿನ್ನದ ಗಣಿಯಲ್ಲಿ ಸ್ಫೋಟ: 59 ಮಂದಿ ಮೃತ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

ಔಗಾಡೌಗೌ, ಬುರ್ಕಿನಾ ಫಾಸೊ: ಚಿನ್ನದ ಗಣಿಯಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ, ಸುಮಾರು 59 ಮಂದಿ ಸಾವನ್ನಪ್ಪಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬುರ್ಕಿನಾ ಫಾಸೊ ರಾಷ್ಟ್ರದ ನೈರುತ್ಯ ಭಾಗದಲ್ಲಿ ಜರುಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗ್ಯಾಂಬ್ಲೋರಾ ಗ್ರಾಮದಲ್ಲಿ ಈ ಸ್ಫೋಟ ಸಂಭವಿದಿದೆ. ಗಣಿ ಪ್ರದೇಶದಲ್ಲಿ ಚಿನ್ನವನ್ನು ಸಂಸ್ಕರಿಸಲು ಬಳಸಲಾದ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ ಎಂದು ಆರ್​ಟಿಬಿ ವರದಿ ಮಾಡಿದೆ.

ಸ್ಫೋಟ ಭಯಾನಕವಾಗಿತ್ತು. ಎಲ್ಲೆಂದರಲ್ಲಿ ಮೃತದೇಹಗಳು ಬಿದ್ದಿದ್ದವು ಎಂದು ಸ್ಫೋಟದ ಸಮಯದಲ್ಲಿ ಸ್ಥಳದಲ್ಲಿದ್ದ ಅರಣ್ಯ ಸಂರಕ್ಷಣಾಧಿಕಾರಿ ಸಂಸನ್ ಕಂಬೌ ಅವರು ದೂರವಾಣಿ ಮೂಲಕ ಅಸೋಸಿಯೇಟೆಡ್ ಪ್ರೆಸ್‌ ಸ್ಪಷ್ಟನೆ ನೀಡಿದ್ದಾರೆ.

ಗಣಿಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಅದಾದ ನಂತರ ಕೆಲವೇ ನಿಮಿಷಗಳಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ ಎಂದು ಸಂಸನ್ ಕಂಬೌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು: ರಷ್ಯಾ ಮೇಲೆ ಅಮೆರಿಕ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.