ಕಾಂಗೋ: ಮಧ್ಯ ಆಫ್ರಿಕಾ ಕಾಂಗೋದಲ್ಲಿ ವಿಚಿತ್ರ ಲವ್ ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ಒಬ್ಬಳನ್ನು ಪ್ರೀತಿಸಿ ತ್ರಿವಳಿ ಸಹೋದರಿಯರನ್ನು ವರಿಸಿದ್ದಾನೆ. ಹೌದು, 32 ವರ್ಷದ ಲುವಿಜೋ ಒಂದೇ ಸಾರಿ ಮತ್ತು ಒಂದೇ ದಿನ ತ್ರಿವಳಿ ಸಹೋದರಿಯರನ್ನು ಮದುವೆಯಾದ 'ಅದೃಷ್ಟವಂತ'. ಆದರೆ, ಲುವಿಜೋ ಪ್ರೀತಿಸಿದ್ದು ಮಾತ್ರ ಈ ಮೂವರಲ್ಲಿ ಒಬ್ಬರನ್ನು. ಆದ್ರೆ ಮೂವರನ್ನು ಮದುವೆಯಾಗುವ ಪರಿಸ್ಥಿತಿ ಬಂದೊದಗಿತ್ತು.
ಓದಿ: ಪಂಚ ತೀರ್ಪು: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್‌ಗೆ ಸೋಲು
ಲುವಿಜೋಗೆ ಸಾಮಾಜಿಕ ಜಾಲತಾಣದಲ್ಲಿ ನಟಾಲಿ ಎಂಬಾಕೆಯ ಜೊತೆ ಪರಿಚಯವಾಗಿದೆ. ಬಳಿಕ ಅವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ನಟಾಲಿ ಜೊತೆ - ಆಕೆಯಂತೆ ಇದ್ದ ಇನ್ನೂ ಇಬ್ಬರು ಸಹೋದರಿಯರನ್ನು ಸಹ ಭೇಟಿ ಮಾಡಿದ್ದ ವಿಷಯ ತಿಳಿಯುವುದಕ್ಕೆ ಆತನಿಗೆ ಬಹಳ ಸಮಯಬೇಕಾಗಿತ್ತು.
ಒಬ್ಬರಂತೆ ಒಬ್ಬರು ಇದ್ದ ಆ ಸಹೋದರಿಯರನ್ನು ಆತ ಗುರುತಿಸಲು ಸಾಧ್ಯವಾಗಿರಲಿಲ್ಲ. ನಟಾಲಿ ಜೊತೆ ನತಾಷಾ ಮತ್ತು ನಡಗೆಯೊಂದಿಗೆ ಪ್ರೇಮದಲ್ಲಿ ಬಿದ್ದಿದ್ದಾನೆ. ಮೂವರು ಅಕ್ಕ - ತಂಗಿಯರು ಒಂದೇ ಸಾರಿ ಬಂದು ನಾವು ನಿನ್ನ ಮದುವೆಯಾಗಲು ಇಷ್ಟಪಡುತ್ತಿದ್ದೇವೆ ಎಂದು ಹೇಳಿದಾಗ ಆತನಿಗೆ ಅಚ್ಚರಿಯಾಯಿತು. ಆಗ ಆತನಿಗೆ ನಾನು ಒಬ್ಬಳನ್ನಲ್ಲ ಮೂವರನ್ನು ಪ್ರೀತಿಸುತ್ತಿದ್ದೇನೆ ಎಂಬುದು ಅರಿವಾಯಿತು. ಬಳಿಕ ಅವರ ಮಾತುಗಳನ್ನು ಬೇಡ ಎಂದು ಹೇಳಲು ಸಾಧ್ಯವಿಲ್ಲದೆ ಲುವಿಜೋ ಮೂವರನ್ನು ಒಂದೇ ದಿನ, ಒಂದೇ ಸಾರಿ ಮದುವೆಯಾಗಿದ್ದಾನೆ.